ಧಾರ್ಮಿಕ ಕ್ಷೇತ್ರದಲ್ಲಿ ಹುನಕುಂಟಿ ಮಠದ ಕೊಡುಗೆ ಅಪಾರ-ಈಶ್ವರ ವಜ್ಜಲ್

ಲಿಂಗಸಗೂರು.ನ.೩-ಹುನಕುಂಟಿಯ ಶ್ರೀಮಠವು ಪಾರಂಪರಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಮಠದ ಕೊಡುಗೆಯು ಅಪಾರವಾಗಿದೆ ಎಂದು ಬಿಜೆಪಿಯ ಯುವಮೋರ್ಚಾದ ಅಧ್ಯಕ್ಷ ಈಶ್ವರ ಎಂ.ವಜ್ಜಲ್ ಹೇಳಿದರು.
ಅವರು ತಾಲೂಕಿನ ಹುನಕುಂಟಿ ಗ್ರಾಮದ ರೇವಣಸಿದ್ದರ ಮಠದಲ್ಲಿ ಏರ್ಪಡಿಸಿದ ಶಿವಯೋಗಿ ರಾಮಲಿಂಗಯ್ಯ ತಾತನವರ ೧೯ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಹಲವಾರು ದಿನಗಳಿಂದ ಮಠವು ಉತ್ತಮ ಕಾರ್ಯಮಾಡುತ್ತಾ ಬಂದಿದೆ ಎಂದರು.
ನಂತರ ಸಿಪಿಐ ಮಹಾಂತೇಶ ಸಜ್ಜನ್ ಮಾತನಾಡುತ್ತಾ ಸಮಾಜದಲ್ಲಿಏನಾದರು ಸಿಗಬಹುದು ಆದರೆ ಆಧ್ಯಾತ್ಮಿಕತೆ ಸಿಗುವುದು ಬಹಳ ಕಷ್ಟ ಅಂತಹ ಆಧ್ಯಾತ್ಮಕತೆಯನ್ನು ನೀಡುವ ಕೆಲಸವನ್ನು ರೇವಣಸಿದ್ದೇಶ್ವರ ಮಠ ಮಾಡುತ್ತಿದ್ದು ನಾವೆಲ್ಲರ ಮಠದ ಅಭಿವೃದ್ದಿಗೆ ಶ್ರಮಿಸೋಣವೆಂದರು.
ಈ ಸಂದರ್ಭದಲ್ಲಿ ಶ್ರೀಮಠದ ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್ ತುರುವಿಹಾಳ, ಸಿದ್ದಯ್ಯ ಗ್ಯಾನಪ್ಪಯ್ಯನವರು, ಬಾಲಯ್ಯ ಗುರುವಿನಶಿವಯ್ಯ ಗುರುವಿನ್ ಮಲ್ಲರಡ್ಡೆಪ್ಪ, ಪರಮೇಶ ಯಾದವ, ಶಿವಶಂಕರಗೌಡ ಉಪ್ಪಾರನಂದಿಹಾಳ ಸೇರಿದಂತೆ ಇದ್ದರು.