ಧಾರ್ಮಿಕ ಕ್ಷೇತ್ರಗಳಿಂದ ಮಾನಸಿಕ ನೆಮ್ಮದಿ

ಗೌರಿಬಿದನೂರು.ಏ೧೯:ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಭಕ್ತಾಧಿಗಳ ಮಾನಸಿಕ ಹಾಗೂ ದೈಹಿಕ ನೆಮ್ಮದಿಗೆ ಕಾರಣವಾಗುವುದಲ್ಲದೆ ಕ್ಷೇತ್ರವು ಹೆಚ್ಚು ಆಕರ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರದ ಸಮೀಪದಲ್ಲಿನ ಕಲ್ಲೂಡಿ ಗ್ರಾಮದ ಹೊರವಲಯದಲ್ಲಿರುವ ಕಲ್ಲಿನಾಥೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಿಮೆಂಟ್ ರಸ್ತೆಗೆ ಭೂಮಿ ಪೂಜೆ ಮಾಡಿ ಹಿರಿಯರನ್ನು ಅಭಿನಂಧಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಎರಡೂವರೆ ದಶಕದಿಂದಲೂ ಈ ಪುಣ್ಯ ಕ್ಷೇತ್ರವು ಹಂತ ಹಂತವಾಗಿ ಅಭಿಯಾಗುತ್ತಿದ್ದು, ಭವಿಷ್ಯದಲ್ಲಿ ಒಂದು ಅದ್ಬುತವಾದ ಧಾರ್ಮಿಕ ಕ್ಷೇತ್ರದ ಜತೆಗೆ ಪ್ರೇಕ್ಷಣೀಯ ಸ್ಥಳವಾಗುತ್ತದೆ. ಇದಕ್ಕಾಗಿ ಗ್ರಾಮದ ಹಿರಿಯರು ದಶಕದಿಂದಲೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ಕೂಡ ಗ್ರಾಮಸ್ಥರ ಸಹಕಾರ ಮತ್ತು ಒಮ್ಮತದ ತೀರ್ಮಾನದ ಮೇಲೆ ಅವಲಂಭಿತವಾಗಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಮುಖಂಡರಾದ ಕೆ.ವಿ.ನಂಜುಂಡಗೌಡ ಮಾತನಾಡಿ, ಕಲ್ಲಿನಾಥೇಶ್ವರ ದೇವಾಲಯವು ಸುಮಾರು ೩ ದಶಕಗಳಿಂದಲೂ ಆಮೆ ವೇಗದಲ್ಲಿ ಅಭಿವೃದ್ಧಿ ಕಾಣುತ್ತಾ ಬರುತ್ತಿದ್ದು, ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹಾಗೂ ಭಕ್ತಾಧಿಗಳೇ ಬೆನ್ನೆಲುಬಾಗಿದ್ದಾರೆ. ಇವರೆಲ್ಲರ ಅವಿರತ ಶ್ರಮ ಹಾಗೂ ಸಹಕಾರದಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಹೊಂದಿ ಖ್ಯಾತಿ ಪಡೆಯಲು ಸಾಧ್ಯವಾಗಿದೆ. ಇದರಂತೆ ಶಾಸಕರು ಭವಿಷ್ಯದಲ್ಲಿ ಬೆಟ್ಟದ ಸುತ್ತಲೂ ತಂತಿ ಬೇಲಿಯ ಕಾಂಪೌಂಡ್ ನಿರ್ಮಿಸಲು ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ದೇವಾಲಯದ ಆವರಣದಲ್ಲಿ ಸುಮಾರು ೧೮ ಲಕ್ಷ ಅನುದಾನದ ಸಿಮೆಂಟ್ ರಸ್ತೆ ಕಾಮಗಾರಿಗೆ ಗಣ್ಯರು ಭೂಮಿ ಪೂಜೆ ಮಾಡಿದರು.
ಕಲ್ಲಿನಾಥೇಶ್ವರ ಸೇವಾ ಸಂಘದ ಪದಾಧಿಕಾರಿಗಳಾದ ಕೆ.ವಿ.ನಂಜುಂಡಗೌಡ, ಕೆ.ಎಸ್.ನರಸಿಂಹಮೂರ್ತಿ, ಕ್ಯಾಪ್ಟನ್ ಸತೀಶ್ ಕುಮಾರ್ ರವರನ್ನು ವೇದಿಕೆಯಲ್ಲಿ ಅಭಿನಂಧಿಸಲಾಯಿತು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್, ಮುಖಂಡರಾದ ಎನ್.ಬಾಬಣ್ಣ, ವೆಂಕಟಪ್ಪ, ಬಿ.ಎನ್.ಆನಂದ್, ನರಸಿಂಹಮೂರ್ತಿ, ಗಂಗಾಧರ್, ನಾರಾಯಣಚಾರ್, ಗೋವಿಂದರಾಜು, ಎಚ್.ಎನ್.ಪ್ರಕಾಶರೆಡ್ಡಿ, ಮುದ್ದುರಂಗಪ್ಪ, ನರಸಪ್ಪ, ಕೆ.ಎನ್.ಚೇತನ್ ಕುಮಾರ್, ಸುರೇಶ್ ಬಾಬು, ಕೃಷ್ಣಯ್ಯ, ಟಿ.ಸಿ.ದೊಡ್ಡೇಗೌಡ, ಗಂಗಪ್ಪ ಭಾಗವಹಿಸಿದ್ದರು.