ಧಾರ್ಮಿಕ ಕಾರ್ಯಗಳಿಂದ ಸನ್ಮಾರ್ಗಕ್ಕೆ ದಾರಿ: ಬಡದಾಳ ಶ್ರೀ

ಆಳಂದ:ಎ.12: ಜಾತ್ರೆ, ಉತ್ಸವ ಧಾರ್ಮಿಕ ಕಾರ್ಯಕ್ರಮಗಳಿಂದ ಸನ್ಮಾರ್ಗಕ್ಕೆ ದಾರಿಮಾಡಿಕೊಡುತ್ತದೆ ಎಂದು ಬಡದಾಳ ತೇರಿನ ಮಠದ ಡಾ. ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

ತಾಲೂಕಿನ ಝಳಕಿ (ಕೆ), ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತಾ ಶ್ರೀ ಭೀಮಾಶಂಕರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಕಲಬುರಗಿ ಮಹಾದಾಸೋಹಿ ಶ್ರೀಶರಣಬಸವೇಶ್ವರ ಪುರಾಣ ಮಹಾಮಂಗಲ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಝಳಕಿ ಕೆ. ಸುಕ್ಷೇತ್ರದ ಭೀಮಾಶಂಕರ ದೇವರ ಜಾತ್ರೆ, ಉತ್ಸವ ಪರಂಪರೆ ಮಾನವನ ಅವಿಭಾಜ್ಯ ಅಂಗವಾಗಿದ್ದು, ಒತ್ತಡ ಬದುಕಿನಿಂದ ಹೊರಬರಲು ಪ್ರತಿಯೊಬ್ಬರು ಧರ್ಮ ಮಾರ್ಗವನ್ನು ಅನುಸರಿಸಿ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಂಡು, ಕಾಯಕ ದಾಸೋಹದ ಮೂಲಕ ಭಕ್ತರ ಬಾಳು ಬೆಳಗಿ ಸಂದೇಶ ನೀಡಿದ ಶರಣಬಸವೇಶ್ವರ ತತ್ವಗಳಡಿ ಎಲ್ಲರೂ ಮಾದರಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಮಾಡಿಯಾಳ ಒಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು, ಚಿನ್ಮಗಿರಿ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ಮಾತನಾಡಿದರು.

ಶರಣಬಸವೇಶ್ವರ ಪುರಾಣವನ್ನು ನಡೆಸಿಕೊಟ್ಟಿದ್ದ ಖಾನಾಪೂರ ಯೋಗಿರಾಜೇಂದ್ರ ಶಾಸ್ತ್ರಿಗಳು ಮಹಾಮಂಗಲ ಕೈಗೊಂಡು ಪುರಾಣವನ್ನು ಸಾಂಕೇತಿಕವಾಗಿ ಪುನಾರಂಭಿಸಿದರು. ಗವಾಯಿ ಬಸÀಲಿಂಗಯ್ಯಾ ಅಂಕಲಗಿ ಇನ್ನಿತರರು ಭಕ್ತಿಗೀತೆಗಳು ಸಾಧರಪಡಿಸಿದರು.

ಇದೇ ವೇಳೆ ಚುನಾವಣೆ ಶಾಂತಿ ಸುವ್ಯವಸ್ಥೆಗಾಗಿ ಗ್ರಾಮದ ಮಾದನಹಿಪ್ಪರಗಾ ಪೊಲೀಸ್ ಠಾಣೆಯಿಂದ ಕೈಗೊಂಡಿದ್ದ ಯೋದರ ಮತ್ತು ಪೊಲೀಸ್ ಸಿಬ್ಬಂದಿಗಳ ಪಥಸಂಚಲವನ್ನು ಸ್ವಾಗತಿಸಿ ಗೌರವಿಸಿ ಬೀಳ್ಕೊಡಲಾಯಿತು.

ದೇವಸ್ಥಾನ ಕಮೀಟಿ ಅಧ್ಯಕ್ಷ ಮಲ್ಲಿನಾಥ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಶ್ರೀಶೈಲ ಪಾಟೀಲ, ಕಾರ್ಯದರ್ಶಿ ಶರಣಬಸವ ಶಿರೋಳ, ಪರಮೇಶ್ವರ ಲೋಹಾರ, ಸಿದ್ಧರಾಮ ರೇವೂರ, ಭೀಮಣ್ಣಾ ಶೇರಿಕಾರ, ಶ್ರೀಶೈಲ ಪೊಲೀಸ್ ಪಾಟೀಲ, ಕಲ್ಲಯ್ಯಾ ಕೊಗನೂರ, ಶ್ರೀಮಂತ ನಂದರ್ಗಿ, ಸೂತ್ರಯ್ಯಾಅ ಮಠಪತಿ, ಚಂದ್ರಕಾಂತ ರೇವೂರ, ಗುರುಶಾಂತಪ್ಪಾ ಪಾಟೀಲ, ಅಮೃತ ಶಿರೋಳ, ರಮೇಶ ಪಾಟೀಲ, ಭೀಮಾಶಂಕರ ಚಾಟಿ, ಶಿವಾನಂದ ಬಾಸಗಿ, ಪರಮೇಶ್ವರ ಕಂಬಾರ ಮತ್ತು ಬಸವ ಸೇನಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಹಣಮಂತ ಜಮಾದಾರ ನಿರೂಪಿಸಿದರು.

ಈ ಮೊದಲು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಭೀಮಾಶಂಕರ ದೇವರ ಪಲ್ಲಕ್ಕಿ ಉತ್ಸವ ಕುಂಭ, ಕಳಸ ವಾದ್ಯ ವೈಭವದೊಂದಿಗೆ ಜರುಗಿ ಸಂಜೆ ಅದ್ಧೂರಿಯಾಗಿ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. 15 ದಿನ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದಾಸೋಹ ಸೇವೆ ಷಣ್ಮೂಖಯ್ಯಾ ಹಿರೇಮಠ, ದತ್ತಾತ್ರೆಯ ಬಿ.ಕೋಚ್ಚಿ, ಶಾಂತಪ್ಪ ಕೊಲ್ಲಳ್ಳಿ, ಶಿವಾನಂದ ಭಾಸಗಿ, ಶ್ರೀಶೈಲ ಎಸ್. ಪಾಟೀಲ, ಶರಣಗೌಡ ಎಸ್. ಮಾಲೀಪಾಟೀಲ, ಶಾಂತಪ್ಪ ಎನ್. ಫುಲಾರಿ, ಸ್ವಾತಿ ಕಾಶಿನಾಥ ಕದರಗಿ, ಮಹಾಂತಪ್ಪ ಎಸ್. ಬನಶೆಟ್ಟಿ, ಸೋನಾಬಾಯಿ ಎಸ್. ತಳಕೇರಿ, ಸಿದ್ರಾಮಪ್ಪ ಡಿ. ಗುರವ, ಭೀಮಲಿಂಗ ಆರ್. ಕೊರಳ್ಳಿ, ಜಗನಾಥ ಎಸ್. ಪಾಟೀಲ ಸೇರಿ ಇನ್ನಿತರ ಸೇವೆ ಕೈಗೊಂಡರು.

ಏ. 12ರಂದು ಜಂಗಿ ಪೈಲ್ವಾನರ ಕುಸ್ತಿ, ರಾತ್ರಿ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.