ಧಾರ್ಮಿಕ ಕಾರ್ಯಕ್ರಮಗಳು ನಾಡಿನ ಸಾಂಸ್ಕøತಿಕ ಪ್ರತೀಕ

ಕಾಳಗಿ.ಫೆ.9: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆ, ಜಾತ್ರೆ ಸಮಾರಂಭಗಳು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಬಿಂಬಿಸುತ್ತವೆ ಎಂದು ಜಿಡಗಾ – ಅಚಲೇರಿ ಪೂಜ್ಯ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಮಂಗಲಗಿ ಗ್ರಾಮದಲ್ಲಿ ಶ್ರೀ ಸದ್ಗುರು ಯಲ್ಲಾಲಿಂಗ ಮಹಾರಾಜರ 38ನೇ ಜಾತ್ರಾ ಮಹೋತ್ಸವ ಹಾಗೂ ತೊಟ್ಟಿಲ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಮಹಾದಾಸೋಹಿ ಶರಣಬಸವೇಶ್ವರ ಮಹಾಪುರಾಣ ಮಹಾಮಂಗಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲ್ಲಿ ನಡೆಯುವ ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದರು.

ಶ್ರೀನಿವಾಸ್ ಸರಡಗಿ ಶಕ್ತಿಪೀಠದ ಡಾ. ಅಪ್ಪರಾವ ದೇವಿ ಮುತ್ಯಾ ಆಶಿರ್ವಚನ ನೀಡಿ, ಸದ್ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಶ್ರದ್ಧೆ ಭಕ್ತಿಯಿಂದ ಮಾಡುವ ಪ್ರಾರ್ಥನೆಯನ್ನು ಭಗವಂತನು ಸ್ವೀಕರಿಸುತ್ತಾನೆ. ಭಗವಂತನಲ್ಲಿ ಸದೃಢವಾದ ನಂಬಿಕೆಯನ್ನು ಪ್ರತಿಯೊಬ್ಬರೂ ಹೊಂದಬೇಕು. ಸದ್ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಭಗವಂತನಲ್ಲಿದೆ ಎಂದರು.

ಸುಲೇಪೇಟ ಏಕದಂಡಗಿ ಮಠದ ಪೂಜ್ಯ ದೊಡೆಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ಪ್ರತಿನಿತ್ಯವೂ ದೇವರ ಸ್ಮರಣೆ ಹಾಗೂ ಗ್ರಾಮಗಳಲ್ಲಿ ಸಾಮೂಹಿಕವಾಗಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ ಎಂದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ ಮಾತನಾಡಿ, ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ದೇಶ ಭಕ್ತಿ, ಪರೋಪಕಾರ, ಸಂಪ್ರದಾಯ ಆಚರಣೆ ಕುರಿತು ನಂಬಿಕೆ ಮೂಡುವಂತೆ ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು.

ಸಂಭ್ರಮದ ರಥೋತ್ಸವ : ಇದಕ್ಕೂ ಮೊದಲು ಅಪಾರ ಭಕ್ತ ಸಮೂಹದ ಮಧ್ಯೆ ಸದ್ಗುರು ಯಲ್ಲಾಲಿಂಗ ಮಹಾರಾಜ ಭವ್ಯ ರಥೋತ್ಸವ ಜರುಗಿತು. ಭಕ್ತರು ತೇರಿನತ್ತ ಉತ್ತುತ್ತಿ, ಬಾಳೆ ಹಣ್ಣು ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು.

ಪಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಪಿಎಸ್‍ಐ ಸಲಾವೊದ್ದಿನ, ಲೋಕೋಪಯೋಗಿ ಜೆಇ ಅಕ್ಷಯ ಕುಲಕರ್ಣಿ ಮಾತನಾಡಿದರು.

ಸಿದ್ಧಲಿಂಗ ಮಹಾರಾಜ ಪುಣ್ಯಾಶ್ರಮ ಧರ್ಮದರ್ಶಿ ಗುರುನಾಥ ಮಹಾರಾಜ, ಸಾಯಿಬಣ್ಣ ಕೊಟನೂರ, ಬಾಬುರಾವ ಪೂಜಾರಿ, ಭೀಮರಾವ ದಂಡೊತಿ, ದೊಂಡಿಬಾ ಪಾಟೀಲ, ರಾಜಶೇಖರ ನೀಲಹಳ್ಳಿ, ಗುಂಡಪ್ಪ ಭೂತಪೂರ, ಕಲ್ಯಾಣಕುಮಾರ್ ಶೀಲವಂತ, ಮಲ್ಲಿಕಾರ್ಜುನ ಉಪ್ಪಾಣಿ, ಶ್ರೀಕಾಂತ್ ಕಲಬುರಗಿ, ವೀರೇಶ ಭೂತಪೂರ, ಬಸವರಾಜ ದುಲಗುಂಡಿ, ಮೊನಪ್ಪ ವಿಶ್ವಕರ್ಮ ಇತರರು ಇದ್ದರು.
ಪುರಾಣಿಕರ ಮಲ್ಲಿಕಾರ್ಜುನ ಶಾಸ್ತ್ರಿ, ಗವಾಯಿ ಶ್ರೀಶೈಲಕುಮಾರ ವಗ್ಗಾವಿ, ತಬಲಾ ವಾದಕ ಮನೋಹರ ವಿಶ್ವಕರ್ಮ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಮಹೇಶ ತುಪ್ಪದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.