ಧಾರ್ಮಿಕ ಕಾರ್ಯಕ್ರಮಗಳಿಗೆ ದಕ್ಕೆ ತಂದ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.10:ಪಟ್ಟಣದಲ್ಲಿ ಮಾ.8ರಂದು ಜರುಗಿದ ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಭಾವ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಭಾವಚಿತ್ರಗಳ ಪ್ರದರ್ಶನಕ್ಕೆ ಪ್ರೋತ್ಸಾಹಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಪಿಎಂ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲಾ ಸಿಪಿಎಂ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎಸ್.ಶಿವಶಂಕರ್ ಮಾತನಾಡಿದ ಅವರು ಮಂಗಳವಾರ ನಡೆದ ಪಟ್ಟಣದ ಆರಾಧ್ಯ ದೈವ ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಜರುಗುವ ಕೆಲ ನಿಮಿಷಗಳ ಹಿಂದೆ ಶಿವಶರಣೆ ಶ್ರೀ ನೀಲಮ್ಮ ತಾಯಿ ಪಲ್ಲಕ್ಕಿ ಉತ್ಸವ ಜರುಗುವ ಸಂದರ್ಭದಲ್ಲಿ ಸಾಂಪ್ರದಾಯಕವಾಗಿ ನಡೆಯುವ ಕಾರ್ಯಕ್ರಮಕ್ಕೆ ಕುರುಗೋಡು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಂದ ಹಲವಾರು ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ಅಂತಹ ಕಾರ್ಯಕ್ರಮ ಗಳನ್ನು ಗೊಂದಲ ಮೂಡಿಸುವಂತ ರಾಜಕೀಯ ನಾಯಕರು ಕೀಳು ಮಟ್ಟದ ಪ್ರಚಾರ ಗಿಟ್ಟಿಸಿಕೊಳ್ಳಲು
ಭಾವಚಿತ್ರಗಳನ್ನು ಬಳಸಿರುವುದು ವಿಪರ್ಯಾಸವಾಗಿದೆ.
ಶ್ರೀ ದೊಡ್ಡಬಸವೇಶ್ವರ ಗೂಳಿಯನ್ನು ಹಿಡಿಯುವುದು ಹಾಲಿ ಮತ್ತು ಮಾಜಿ ಶಾಸಕರುಗಳು ಅಲ್ಲ ಈ ಕಾರ್ಯಕ್ರಮಗಳು ತಲತಲಾಂತರದಿಂದ ಆಯಾ ಜನರಿಗೆ ಮಿಸಾಲಿರಿಸಿದೆ, ಜನರು ತಮ್ಮ ತಮ್ಮ ಧಾರ್ಮಿಕ ಕಾರ್ಯಕ್ರಮಗಳು ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಲಿ ಶಾಸಕರು ಭಾವ ಚಿತ್ರಗಳನ್ನು ಪ್ರದರ್ಶಿಸಿ ಪ್ರಚಾರ ಪಡೆದರೆ ಮಾಜಿ ಶಾಸಕರು ಗೂಳಿ ಹಿಡಿದು ಪ್ರಚಾರ ಪಡೆದಿದ್ದಾರೆ ಅವರ ಪ್ರಚಾರ ಇಂತಹ ಸಾಂಪ್ರದಾಯಕ ಕಾರ್ಯಕ್ರಮಗಳಲ್ಲಿ ಮಾಡಿರುವುದು ಅಕ್ಷಮ್ಯ ಅಪರಾಧ ವಾಗಿದೆ ಎಂದು ಆರೋಪಿಸಿದರು.
ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಾರ್ಗದರ್ಶನದಲ್ಲಿ ನಡಿಯುತ್ತ ಬಂದಿದೆ ಎಂದರು.
ಜನರಿಂದ ವಿರೋಧ ವಿದ್ದರೂ ಸಹ ಧಾರ್ಮಿಕ ದತ್ತಿ ಇಲಾಖೆಯು ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೆ ಕಂಡು ಕಾಣದೆ ಮೂಕ ಪ್ರೇಕ್ಷಕರಾಗಿರುವುದು ಭಕ್ತರ ಮನಸ್ಸಿಗೆ ನೋವು ತಂದಿದೆ ಹಾಗೂ ಜನರ ಭಾವನೆಗಳಿಗೆ ದಕ್ಕೆ ತಂದಿದೆ ಆದಕಾರಣ ಧಾರ್ಮಿಕ ದತ್ತಿ ಇಲಾಖೆ ಹಾಗೂ ರಾಜಕೀಯ ನಾಯಕರ ಮೇಲೆ ನ್ಯಾಯದೀಶರನ್ನೊಳಗೊಂಡ ವಿಶೇಷ ಸಮಿತಿ ರಚನೆ ಮಾಡಿ ಸಮಗ್ರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಗಾಳಿ ಬಸವರಾಜ್, ಯಂಕಮ್ಮ, ಸಣ್ಣ ಕೆಂಚಪ್ಪ,ಮಂಜುನಾಥ್,ಮುದುಕಪ್ಪ,ಸೇರಿದಂತೆ ಇತರರು ಇದ್ದರು.