
ಲಕ್ಷ್ಮೇಶ್ವರ,ಮೇ2 : ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಜರುಗಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ವೀರ ಮುಕ್ತಿಮುನಿ ಶಿವಾಚಾರ್ಯರು ಚಾಲನೆ ನೀಡಿದರು.
ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ದೇವಿ ದ್ಯಾಮವಳ ಭವ್ಯ ಮೂರ್ತಿಯ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಅತ್ಯಂತ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಗ್ರಾಮದೇವಿಯ ಮೆರವಣಿಗೆಯ ಮುಂಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ದ ಮಹಿಳಾ ಡೊಳ್ಳು ಕುಣಿತದವರು ಕುದುರೆ ಕುಣಿತದವರು ರಾಣಿಗಾಗಳು ವೀರಗಾಸೆ ಕುಣಿತದವರು ಝಾಂಜ್ ಮೇಳದವರು ಕುಂಭ ಹೊತ್ತ ಸುಮಂಗಲ ಯರು ಜೊತೆಗೆ ಜೋಗತಿಯರು ಜೋಗ ಹಾಕುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರು.
ಇಡೀ ಗ್ರಾಮ ಹಬ್ಬದ ಸಂಭ್ರಮದಲ್ಲಿ ತೇಲಿ ಬಂದಿತ್ತು ಗ್ರಾಮದ ತುಂಬೆಲ್ಲ ಕೇಸರಿಯ ಪರಿಪರಿಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಅತ್ಯಂತ ಶಿಸ್ತು ಕಾಯ್ದುಕೊಳ್ಳಲಾಗಿತ್ತು.