ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ ಪ್ರಾಪ್ತಿ : ಹೆಡಗಾಪೂರ ಶ್ರೀ

ಔರಾದ :ನ.23: ಮಠ-ಮಾನ್ಯಗಳಲ್ಲಿ ನಿರಂತರ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಔರಾದ ತಾಲೂಕಿನ ಹೆಡಗಾಪೂರ ಮಠದ ಪೂಜ್ಯ ಶ್ರೀ, ಷ.ಬೃ ಶಿವಲಿಂಗ ಶಿವಾಚಾರ್ಯ ಪಾದ ಯಾತ್ರೆಗೆ ಪಾದಯಾತ್ರೆಯ ಚಾಲನೆ ನೀಡಿ ಮಾತನಾಡಿದರು.

ಶ್ರೀ ಶ್ರೀ ಶ್ರೀ ಗುರುದೇವ ದತ್ತ ದಿಗಂಬರ ಮಾಣಿಕೇಶ್ವರ ಧರಿ ಹನುಮಾನ ಸುಕ್ಷೇತ್ರ ಲಾಧಾ ದಿಂದ ಪರಸಗುಡ್ಡ ಕಲ್ಮೂಡ ವರೆಗೆ ಪಾದಯಾತ್ರೆಯನ್ನು ನವಂಬರ 22 ರಂದು ಅವರು ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ಪಾದ ಯಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ನನಗೆ ಸಂತೋಷ ತಂದಿದೆ ಪ್ರತಿ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲು ಕರೆ ನೀಡಿದರು. ನವೆಂಬರ್ 27 ರಂದು ಈ ಪಾದಯಾತ್ರೆಯನ್ನು ಶ್ರೀ ಶ್ರೀ ಶ್ರೀ ಗುರುದೇವದತ್ತ ದಿಗಂಬರ ಮಾಣಿಕೇಶ್ವರ ದೇವಸ್ಥಾನ ಪರಷಗುಡ್ಡಾ ಕಲ್ಮಡಕ್ಕೆ ತಲುಪುತ್ತದೆ ಎಂದು ತಿಳಿಸಿದರು.

ಔರಾದ ತಾಲೂಕಿನ ಹೆಡಗಾಪೂರ ಮಠದ ಪೂಜ್ಯ ಶ್ರೀ, ಷೋ,ಬ್ರ. ಶಿವಲಿಂಗ ಶಿವಾಚಾರ್ಯರು ಪಾದಯಾತ್ರೆಯ ಚಾಲನೆ ಕಾರ್ಯಕ್ರಮದ ಸಾನಿಧ್ಯ ವಹಿಸಿದರು. ಚಾಂಬೋಳ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ಪಾದಯಾತ್ರೆ ಚಾಲನೆ ಕಾರ್ಯಕ್ರಮದ ನೇತೃತ್ವವಹಿಸಿದರು.

ಈ ಸಂದರ್ಭದಲ್ಲಿ ಮಹೇಶ ಮೈಲಾರೆ, ಪ್ರಕಾಶ ವರ್ತರ, ಬಸಪ್ಪಾ ಮಾಣೂರೆ, ವಿರೇಂದ್ರಸಿಂಗ ಠಾಕೂರ, ವಿಷ್ಣು ಕುಲಕರ್ಣಿ, ಕಿರಣ ಪಾಟೀಲ್ ಯೆರನಳ್ಳಿ, ಮಹೇಶ ಪಾಟೀಲ ಮಿರ್ಜಾಪೂರ(ಕೆ), ವೀರಶಟ್ಟಿ ಪಾಟೀಲ್ ಬಾಬಳಿ, ಗಂಗಶೆಟ್ಟಿ ಪಾಟೀಲ್, ಹೊನಪ್ಪಾ ಮುಚಳಂಬೆ ಲಾಧಾ, ಪ್ರಕಾಶ ಬಂಬುಳಗಿ ಲಾಧಾ, ನಾಗನಾಥ ಕೋಟೆ ಜೀರ್ಗಾ(ಬಿ), ಶಿವರಾಜ ಬೆಳ್ಳೂರ, ಸಂಜು ಮಾನೂರೆ, ರಾಮಶೆಟ್ಟಿ ಬಂಬಳುಲಗಿ ಜೀರ್ಗಾ(ಬಿ), ಬಸವರಾಜ ಮಾನೂರೆ ಲಾಧಾ, ಕಲ್ಲಪ್ಪಾ ವಣಗೆ, ಸುನೀಲ ಮಾನೂರೆ, ಗುಂಡಪ್ಪಾ ಪಾಟೀಲ್ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದರು.

ಪಾದಯಾತ್ರೆಯ ಮಹಾ ದಾಸೋಹಿಗಳಾದ ವಿಶ್ವನಾಥ ಬಂಡೆಪ್ಪ ಪಾಟೀಲ್ ಬಾಬಳಿ, ಶಿವಕುಮಾರ ಪಾಟೀಲ ಬಾಬಳಿ ಹಾಗೂ ಕೆ.ಪಿ. ಪ್ರೌಢಶಾಲೆಯ ಮುಖ್ಯಗುರು, ಭೋಜಾ ರೆಡ್ಡಿ, ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಚಟ್ನಾಳ, ಬಾಬಳಿ, ಸಂತಪೂರ, ಲಾಧಾ, ಮಣಿಗೆಂಪೂರ, ಯೆರನಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಂದ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.