ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ :  ಸಚಿವ ಡಿ ಸುಧಾಕರ್

ಸಂಜೆವಾಣಿ ವಾರ್ತೆ

ಹಿರಿಯೂರು. ಆ.೨೯; ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಜಲ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಹೇಳಿದರು ತಾಲೂಕಿನ ಮಸ್ಕಲ್ಮಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಪ್ರಾದೇಶಿಕ ನಿರ್ದೇಶಕರಾದ ಗೀತಾ ಮಾತನಾಡಿ ಅಳಿದು ಹೋಗುತ್ತಿರುವ ಸುಸಂಸ್ಕೃತವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ ಧಾರ್ಮಿಕ ಕಾರ್ಯಕ್ರಮದ ಮೂಲಕ ಭಜನಾ ಕಾರ್ಯಕ್ರಮದ ಮೂಲಕ ಸಾಮಾಜಿಕ ನೆಮ್ಮದಿಯನ್ನು ಕಾಪಾಡಲು ಸುಲಭ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕರಾಗಿ ಡಾ.ವಿ ವೀರಣ್ಣ ಪ್ರಾಂಶುಪಾಲರು ಪಂಚಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಧರ್ಮಪುರ ಧಾರ್ಮಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಸುವರ್ಣ ಜಿಲ್ಲಾ ನಿರ್ದೇಶಕರು,  ಪೂಜಾ ಸಮಿತಿಯ ಅಧ್ಯಕ್ಷರಾದ ಸೆಂದಿಲ್ ಕುಮಾರ್ ಮಸ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಶ್ರೀಮತಿ ಕೊಲ್ಲಮ್ಮ ಡಾ. ಪ್ರಿಯ  ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ರಾಣಿಬೆನ್ನೂರು. ಹರಿಪ್ರಸಾದ್ ರೈ ಯೋಜನಾಧಿಕಾರಿಗಳು ಮತ್ತಿತರರು   ಭಾಗವಹಿಸಿದ್ದರು