ಮುಂಬೈ,ಮೇ.೨೯- ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಆಚರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕ್ರಮವನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸತ್ ಭವನದ ಉದ್ಘಾಟನೆಯಲ್ಲಿ ಹೋಮ, ‘ಹವನ’, ಸರ್ವ ಧರ್ಮದ ಪ್ರಾರ್ಥನೆ ಮಾಡಿದ ಕ್ರಮವನ್ನು ಅವರು ಟೀಕಿಸಿದ್ದಾರೆ.
ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ೨೧ ಪಕ್ಷಗಳು ಗೈರು ಹಾಜರಾಗಿದ್ದವು. ಅದರಲ್ಲಿ ಶರದ್ ಪವಾರ್ ನೇತೃತ್ವದ ಪಕ್ಷವು ಒಂದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸೆಂಗೊಲ್’ ನೊಂದಿಗೆ ಹೊಸ ಸಂಸತ್ತಿನ ಉದ್ಘಾಟನೆ ಮಾಡಿರುವುದು ಸ್ವಾಗತಾರ್ಹ. ಆದರೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿದ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಉದ್ಘಾಟನೆಯ ಸಮಯದಲ್ಲಿ ಸರಣಿಯಂತೆ ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಸಂತೋಷ. ಆದರೆ ಅವರು ಅನುಸರಿಸಿದ ನೀತಿ ರೀತಿ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಈ ರೀತಿಯ ಘಟನೆಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತವೆ. ಬೆಳಿಗ್ಗೆ ಘಟನೆಯನ್ನು ನೋಡಿದೆ. ನಾನು ಅಲ್ಲಿಗೆ ಹೋಗಲಿಲ್ಲ. ಅದು ನನಗೆ ಸಂತೋಷವಾಗಿದೆ ಎಂದಿದ್ದಾರೆ.
ಅಲ್ಲಿ ಏನಾಯಿತು ಎಂದು ನೋಡಿದ ನಂತರ ನಾನು ಚಿಂತಿತನಾಗಿದ್ದೇನೆ. ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ ಅನ್ನಿಸದೇ ಇರಲಾರದು. ಈ ಈವೆಂಟ್ ಸೀಮಿತ ಜನರಿಗೆ ಮಾತ್ರವಾಗಿತ್ತು ಎಂದು ಅವರು ತಿಳಿಸಿದ್ದಾರೆ.”