ಧಾರಾಕಾರ ಮಳೆ: ರೈತನ ಮೊಗದಲ್ಲಿ ಹರ್ಷ


ಲಕ್ಷ್ಮೇಶ್ವರ,ಮೇ.22: ಪಟ್ಟಣ ಸೇರಿದಂತೆ ತಾಲೂಕಿನ ಅತ್ಯಂತ ಮಂಗಳವಾರ ಬೆಳಗಿನ ಜಾವ ಧಾರಾಕಾರ ಮಳೆ ಸುರಿದು ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.
ಸೋಮವಾರ ಸಾಯಂಕಾಲ ಆರಂಭವಾಗಿ ತಡರಾತ್ರಿ ಬಿರುಸಿನಿಂದ ಮಳೆ ಸುರಿದಿದೆ ಇದರಿಂದಾಗಿ ಮುಂಗಾರು ಪೂರ್ವದ ಬಿತ್ತನೆ ಕಾರ್ಯಕ್ಕೆ ಇದೊಂದು ಹದವರ್ತಿ ಮಳೆಯಾಗಿದೆ.
ಜಮೀನುಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿದ್ದು ರೈತರು ಪ್ರಸಕ್ತ ಹಂಗಾಮಿನ ಮೊದಲ ಮಳೆಯನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿದ್ದಾರೆ.
ಇನ್ನು ಪಟ್ಟಣದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರಮುಖ ಬೀದಿಯಾದ ಭಾನು ಮಾರ್ಕೆಟ್ ಪ್ರದೇಶದಲ್ಲಿನ ರಸ್ತೆಗಳು ಕೆಸರುಗದ್ದೆ ಆಗಿದ್ದವು.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಚರಂಡಿಯ ನೀರು ರಸ್ತೆ ಮೇಲೆ ಹರಿದು ಘನ ತ್ಯಾಜ್ಯಗಳು ರಸ್ತೆಯ ಮೇಲೆ ಬಿದ್ದಿದ್ದವು.
ಕೂಡಲೇ ಪುರಸಭೆಯ ಪೌರಕಾರ್ಮಿಕರು ಭಾನು ಮಾರ್ಕೆಟನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾದರು ವ್ಯಾಪಾರಸ್ಥರು ಮುಂಜಾನೆಯದ್ದು ಅಂಗಡಿ ಮುಗಟ್ಟುಗಳನ್ನು ತೆರೆಯಲು ಬಂದಾಗ ರಸ್ತೆಗಳೆಲ್ಲ ಕೆಸರು ತುಂಬಿಕೊಂಡಿದ್ದವು.
ಈ ಕುರಿತು ಯುವ ಮುಖಂಡ ನಾಗರಾಜ್ ಚಿಂಚಲಿ ಮತ್ತು ರಸ್ತೆ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ ಹೊಗೆಸೊಪ್ಪಿನ ಅವರು ಪ್ರತಿಕ್ರಿಯೆ ನೀಡಿ ಪುರಸಭೆಯವರು ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಮತ್ತು ಮಳೆಗಾಲ ಆರಂಭವಾಗಿ ರುವುದರಿಂದ ಪ್ರಮುಖ ರಸ್ತೆಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಮುಖ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.