ಧಾರಾಕಾರ ಮಳೆ ಆರ್ಭಟಕ್ಕೆ ತತ್ತರಿಸಿದ ರೈತರ ಅತ್ತಿ ಬೆಳೆಗಳಿಗೆ ನಷ್ಟ

ಕವಿತಾಳ.ಆ.೦೪-ಕಳೆದ ಮಂಗಳವಾರದಂದು ಬೆಳಿಗ್ಗೆ ಸುರಿದ ಧಾರಾಕಾರ ಮಳೆಯೂ ರೈತರ ಹೊಲಗಳಿಗೆ ನುಗ್ಗಿ ಅತ್ತಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ನಷ್ಟ ಹೊಂದಿ ಸರಕಾರದ ಪರಿಹಾರಕ್ಕೆ ಮುಂದಾದ ಭೀಮಣ್ಣ ಕಾಚೋಪುರ್ ಇವರು ಸಾಲ ಸೋಲ ಮಾಡಿ ದುಬಾರಿ ಹಣ ಕೊಟ್ಟು ಬೀಜಗಳನ್ನು ತಂದು ಉತ್ತಮವಾದ ಬೆಳೆಗಳನ್ನು ಬೆಳೆದು ಪೈರು ಬರುವ ನಿರೀಕ್ಷೆಯಲ್ಲಿ ಇರುವಾಗ ದಿಢೀರನೆ ಧಾರಕಾರ ಮಳೆ ಸುರಿದು ಹೊಲದಲ್ಲಿ ನೀರು ನುಗ್ಗಿ ಬೆಳೆ ಹಾಳು ಮಾಡಿ ಸಂಪೂರ್ಣ ಐದು ಎಕರೆ ಹತ್ತಿ ಬೆಳೆ ನಷ್ಟ ಹೊಂದಿದ್ದಾರೆ.
ಬೆಳೆ ಸಮೀಕ್ಷೆ ಮಾಡಲು ಯಾವೊಬ್ಬ ಅಧಿಕಾರಿಗಳು ಬರಲಿಲ್ಲ ರೈತ ಈ ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುವ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತುಕೊಂಡಿವೆ ರೈತರಿಗೆ ಪರಿಹಾರ ಕೊಡುವ ಭರವಸೆ ಕೂಡ ನೀಡದೆ ರೈತ ನಿಟ್ಟು ಉಸಿರು ಬಿಟ್ಟು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ.
ಭೀಮಣ್ಣ ಕಾಜಪುರ ಮಾತನಾಡಿ ಕೇವಲ ನನ್ನದೊಂದೆ ಸಮಸ್ಯೆಯಲ್ಲ ಅನೇಕ ರೈತರು ಹೊಲಗಳಿಗೆ ನೀರು ತುಂಬಿ ಬೆಳೆಗಳು ನಷ್ಟ ಒಂದಿವೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ಕೊಟ್ಟು ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಲಿ ಎಂದು ಪರಿಹಾರಕ್ಕೆ ಕಾಯುತ್ತಿದ್ದಾನೆ.
ಮತ್ತೊಂದು ಕಡೆ ಕವಿತಾಳ ಭಾಗದ ರೈತರ ಹೊಲಗಳು ಸೇರಿದಂತೆ ಎಕ್ಲಾಸ್ಫೋರ್ ವಟಗಲ್ ಅಮಿನಗಡ ಇತರೆ ಅನೇಕ ಹುಸೇನ್ಪುರ್ ಅಣಿಗಿ ಗ್ರಾಮಗಳಲ್ಲಿ ಕೂಡ ಮಳೆ ಆರ್ಭಟಕ್ಕೆ ಬೆಳೆಗಳು ತತ್ತರಿಸಿ ನೀರಿನೊಳಗೆ ಮುಳುಗಿ ಕೊಂಡಿವೆ ಭೀಮಣ್ಣ ಕಾಚಪೂರ್ ೫,-ಎಕರೆ ಹತ್ತಿ ಬೆಳೆ ನಷ್ಟ ಸಿದ್ದಪ್ಪ ನರಸಿಂಗಪ್ಪ ಎಂಬುವರ-೩- ಎಕರೆ ತೊಗರೆ ಬೆಳೆ ನಷ್ಟ ರಮೇಶ್ ಎಕ್ಲಾಸ್ ಪುರ್ ಬಸಪ್ಪ ಗರಡಪ್ಪ ಎಂಬುವರ ೮-ಎಕರೆ ಜಮೀನಿನಲ್ಲಿ ತೊಗರಿ ಬೆಳೆ ನಷ್ಟ ಬೆಳೆಗಳಲ್ಲಿ ನೀರು ತುಂಬಿ ಬೆಳೆಗಳು ನಷ್ಟ ಹೊಂದಿ ರೈತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬರದಂತೆ ಹಾಗಿದೆ.
ಈ ವರ್ಷ ಸಂಪೂರ್ಣ ರೈತರು ಬೀಜ ಇಟ್ಟು ತಕ್ಷಣ ಸಕಾಲಕ್ಕೆ ಮಳೆಹಾಗಿ ತೋಟದ ಹೊಲಗಳಿಗಿಂತ ವರ ಹೊಲಗಳಲ್ಲಿ ಹತ್ತಿ ಬೆಳೆಗಳು ತೊಗರಿ ತುಂಬಾ ಚೆನ್ನಾಗಿ ಉತ್ತಮವಾಗಿ ಬೆಳೆ ಬೆಳೆದು ರೈತರಿಗೆ ಹರ್ಷ ತರುವಲ್ಲಿ ಇರುವಾಗ ಮತ್ತೊಂದು ಕಡೆ ವರ್ಣನ ಸರ್ಭಟಕ್ಕೆ ರೈತರು ಬೆಳೆ ನಷ್ಟ ಹೊಂದಿ ತತ್ತರಿಸಿಕೊಂಡು ಗೋಳಾಡುತ್ತಿದ್ದು ಸರ್ಕಾರದಿಂದ ಏನಾದರೂ ಬೀಜಕ್ಕು ಎಣ್ಣೆ ಖರ್ಚಿಗೆ ಏನಾದರೂ ಪರಿಹಾರ ಸಿಗಬಹುದೇ ಎಂದು ಪತ್ರಕರ್ತರ ಮುಂದೆ ಕಣ್ಣೀರಿನ ಕಥೆ ಹೇಳಿದ್ದಾರೆ.
ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ಕೊಟ್ಟು ರೈತರಿಗೆ ಬೆಳೆ ಪರಿಹಾರ ನೀಡಬೇಕು ಇಲ್ಲದಿದ್ದರೆ ರೈತರು ವಿಶ್ವಪೂರಿತ ಎಣ್ಣೆ ಔಷಧಿಗಳನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಕೂಡಲೇ ತಾಲೂಕಿಗೆ ಸಂಬಂಧಪಟ್ಟಂತ ಶಾಸಕರುಗಳು ತಹಶೀಲ್ದಾರರು ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ಕೊಟ್ಟು ಬೆಳೆ ಸಮೀಕ್ಷೆ ಮಾಡಿ ಪರಿಹಾರ ಮಾಡಿಕೊಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಪರಿಹಾರ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಅನೇಕ ರೈತರು ಬೇಡಿಕೊಂಡರು.