ಧಾರಾಕಾರ ಮಳೆಯಿಂದಾಗಿ ಅಂಗಡಿಗಳಿಗೆ ನುಗ್ಗಿದ ನೀರು

ಔರಾದ :ಆ.4: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ, ಕೆಲವೊಂದು ಕಡೆ ಮನೆಗಳಲ್ಲಿ ನೀರು ನುಗ್ಗಿ ಗೋಡೆಗಳ ಕುಸಿತಗೊಳ್ಳುತ್ತಿವೆ.

ಪಟ್ಟಣದಲ್ಲಿ ಬುಧವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಅಮರೇಶ್ವರ ದೇಗುಲದ ಎದುರಿಗೆ ಇರುವ ಅಂಗಡಿಗಳಿಗೆ, ಬಸ್ ನಿಲ್ದಾಣ ಎದುರಿಗೆ ಇರುವ ಅಂಗಡಿ ಮಳಿಗೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಬಟ್ಟೆಗಳು, ಸಾಮಗ್ರಿಗಳು ತೋಯ್ದು ಹೋಗಿವೆ.

ಅಂಗಡಿಗಳ ಮುಂದೆ ಇರುವ ರಸ್ತೆ ಬದಿಗಳಲ್ಲಿ ಕಾಲುವೆ ಮುಚ್ಚಿ ಹೋಗಿವೆ, ಒಂದು ಕಡೆ ಕಸ ವಿಲೇವಾರಿಯಾಗದೆ ಕಾಲುವೆಗಳಲ್ಲಿ ತುಂಬಿ ರಸ್ತೆ ಮೇಲೆ ನೀರು ಹರಿದು ಅಂಗಡಿಗಳಿಗೆ ನುಗ್ಗಿ ಸಾಮಗ್ರಿ ತೊಯ್ದು ಹಾನಿ ಉಂಟಾಗಿದೆ, ರಸ್ತೆ ಬದಿಯಲ್ಲಿ ಕಾಲುವೆ ನಿರ್ಮಾಣ ಮಾಡಿ, ಈ ಆವಾಂತರ ತಪ್ಪಿಸಬೇಕು ಎಂದು ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.