ಧಾರಾಕಾರ ಮಳೆಗೆ ಬೆಳೆನಷ್ಟ: ಕೈಹಿಡಿದ ಉದ್ಯೋಗಖಾತ್ರಿ

ಮಲಿಕಪಾಶಾ ಮೌಜನ್

ವಾಡಿ:ನ.7: ಧಾರಕಾರ ಮಳೆಯಿಂದ ಜನಜೀವನವೇ ತಲ್ಲಣ್ಣಗೊಂಡಿತ್ತು. ದವಸಧಾನ್ಯ ಮಳೆ ಪಾಲಾಯಿತ್ತು. ಮಳೆ ನೀರಿಗೆ ಮನೆಗಳು ಜವಾವೃತ್ತವಾದವು. ಹೊಲದಲ್ಲಿ ಬೆಳೆಗಳು ನಷ್ಟ, ತೀರಾ ಸಂಕಷ್ಟದಲ್ಲಿ ರೈತ್, ಕಾರ್ಮಿಕರ ಬಕುದು. ಮುಂದಿನ ದಿನಗಳು ಕಳೆಯುವುದಾದರು ಹೇಗೆ ಎನ್ನುವ ಚಿಂತೆಯಲ್ಲಿರುವ ಜನರ ಕೈಹಿಡಿದ್ದು ಉದ್ಯೋಗಖಾತ್ರಿ ಯೋಜಯಡಿ

ಹೌದು ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದ ಪಿಡಿಓ ಕಾವೇರಿ ರಾಠೋಡ ಅವರ ನಿರಂತರ ಪ್ರಯತ್ನದಿಂದ ಜನರಿಗೆ ಕೆಲಸ ಸಿಗಲು ಅನುವಾಗಿದೆ. ನಿರಂತರ ಮಳೆಯಿಂದ ಹೊಲಗದ್ದೆಗಳಲ್ಲಿ ಬೆಳೆ ಇಲ್ಲ. ಇದರಿಂದ ಕೆಲಸ ಸಿಗುತ್ತಿಲ್ಲ. ಮಳೆಯಿಂದ ಕಷ್ಟದಲ್ಲಿಯೇ ದಸರಾಹಬ್ಬ ಕಳೆಯಿತ್ತು. ಇನ್ನೇನೋ ದೀಪಾವಳಿ ಹಬ್ಬಕ್ಕಾದರೂ ಅನೂಕೂಲ ಆಗುತ್ತದೆ, ಎನ್ನುವ ಉದ್ದೇಶದಿಂದ ಕೆಲಸ ಪ್ರಾರಂಭಿಸಲಾಗಿದೆ. ಕಾರ್ಮಿಕರು ತಾತ್ಕಾಲಿಕವಾದರು ಬದುಕು ಕೊಟ್ಟಿಕೊಳ್ಳಲು ನೇರವಾಗುತ್ತದೆ. ಅಲ್ಲದೇ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯು ಸಗಾರವಾಗಿ ಸಾಗಲು ಮತಿಷ್ಟು ಅನೂಕುಲವಾಗುತ್ತದೆ.

ರಾವೂರ ಗ್ರಾಪಂ ವ್ಯಾಪ್ತಿಯ ಸರ್ವೆ ನಂ-60ರ ಅಂಬ್ರೇಶ ದೇಸಾಯಿ ಮಾಲೀಕತ್ವದ 4 ಎಕರೆ 19 ಗುಂಟೆ ಜಮೀನಿನಲ್ಲಿ ಬದು ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ. ಕೆಲಸ ಸಿಕ್ಕ ಖುಷಿಯಲ್ಲಿ ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. 330 ಜನ ಕಾರ್ಮಿಕರು ಬದು, ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂತು.


ನಿರಂತರವಾಗಿ ಸುರಿದ ಮಳೆಯಿಂದ ಹೊಲಗದ್ದೆಗಳು ಕೆಸರುಗಟ್ಟಿವೆ. ಕೆಲಸಕ್ಕೆ ಪರದಾಡುವ ಪರಿಸ್ಥತಿ ಇದೆ. ದೀಪಾವಳಿ ಹಬ್ಬ ಬೇರೆ ಇದೆ. ಏನು ಮಾಡಬೇಕು ಎನ್ನುವ ಚಿಂತೆಯಲ್ಲಿರುವ ಉದ್ಯೋಗಖಾತ್ರಿ ಕೆಲಸ ಸಿಕ್ಕಿದೆ. ಇದನ್ನು ಹೀಗೆ ಮುಂದುವರೆಸಬೇಕು.

ಮಹಾದೇವಿ ಕೊಳ್ಳಿ, ಲಾಲಬೀ ಅತಾರ್. ಉದ್ಯೋಗಖಾತ್ರಿ ಕಾರ್ಮಿಕರು.


ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಉದ್ಯೋಗಖಾತ್ರಿ ಯೋಜನೆಯಿಂದ ಅಂತರಜಲ ಮಟ್ಟ ಹೆಚ್ಚಾಗಿ, ಮುಂದಿನ ದಿನದಲ್ಲಿ ರಾವೂರ, ಗಾಂಧಿನಗರಕ್ಕೆ ಸರಳವಾಗಿ ನೀರು ಸಿಗುತ್ತದೆ. ಹಾಗೂ ಬಂಜರು ಜಮೀನನ್ನು ಫಲವತ್ತಾದ ಪರಿವರ್ತಿಸಿ ವ್ಯವಸಾಯ ಬೇಸಾಯ ಮಾಡಿಕೊಳ್ಳಲು ಅನೂಕುಲವಾಗುತ್ತದೆ.

ಅಂಬ್ರೇಶ ದೇಸಾಯಿ ಹೊಲದ ಮಾಲೀಕ್.


ದೀಪಾವಳಿ ಹಬ್ಬ ಬಂತು! ಕಾರ್ಮಿಕರು ಕೆಲಸವಿಲ್ಲದೇ ಜೀವನ ಕಳೆಯುವುದು ಹೇಗೆ ಎನ್ನುವುದನ್ನು ಅರಿತು ಮಹಿಳಾ ಕಾರ್ಮಿಕರ ಜೊತೆ ಪಂಚಾಯತ ಭೇಡಿ ನೀಡಿ ಪಿಡಿಓ ಮೇಡಂಗೆ ಮನವಿ ಮಾಡಿದ್ದೆವು. ಸಮಸ್ಯೆಯನ್ನು ಅರಿತು ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಕಾರ್ಮಿಕರು ಖುಷಿಖಷಿಯಾಗಿ ದುಡಿಯುತ್ತಿದ್ದಾರೆ. ಇನ್ನಷ್ಟು ದಿನ ಕೆಲಸ ನಡೆದರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ.

ಪಾರ್ವತಿ ಕಾರಬಾರಿ ಉದ್ಯೋಗಖಾತ್ರಿ ಮೇಲ್ವೀಚಾರಕಿ.