ಧಾರಾಕಾರ ಮಳೆಗೆ ನೆಲಕ್ಕುರುಳಿದ ಭತ್ತದ ಬೆಳೆ

ದೇವದುರ್ಗ.ಏ.೨೫-ಶನಿವಾರ ತಡರಾತ್ರಿ. ಧಾರಾಕಾರ ಮಳೆ ಗಾಳಿಗೆ ತಾಲೂಕಿನಾದ್ಯಂತ ಬೆತ್ತದ ಬೆಳೆ ಸೇರಿ ವಿವಿಧ ಬೆಳೆಗಳು ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿ ರೈತರಿಗೆ ಬರಸಿಡಿಲು ಬಡಿದಂತಾಗಿದೆ.
ರಾಜ್ಯ ದೇಶದಲ್ಲಿ. ಕರೋನಾ ಮಹಾಮಾರಿ ಎರಡನೇ ಅಲೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ. ರೈತ ಸೇರಿದಂತೆ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮೆಣಸಿನಕಾಯಿ ಭತ್ತ. ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದ್ದು.ಅಕ್ಷರಶಃ ರೈತಾಪಿ ವರ್ಗ ಕಂಗಾಲಾಗಿದೆ.
ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ರೈತರ ಬೆಳೆ. ಟೀನ್ ಶಡ್. ಸೇರಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು. ಕೂಡಲೇ ತಾಲೂಕಾಡಳಿತ. ಸರ್ವೆ ನಡೆಸಿ. ಪರಿಹಾರ ನೀಡಬೇಕೆಂದು ರೈತಾಪಿ ವರ್ಗ ಆಗ್ರಹಿಸಿದೆ.