ಧಾರವಾಡ ಸೇರಿ ೮ ಐಐಟಿಗಳಿಗೆ ನಿರ್ದೇಶಕರ ನೇಮಕ

ನವದೆಹಲಿ,ಸೆ.೨೦- ದೇಶದ ೮ ಐಐಟಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶಕ್ಕೆ ರಾಷ್ಟ್ರಪತಿ ದ್ರೌಪದಿಮುರ್ಮು ಅನುಮೋದನೆ ನೀಡಿದ್ದಾರೆ.
ಈ ಹಿಂದೆ ನಿರ್ದೇಶಕರಾಗಿದ್ದ ಇಬ್ಬರ ಮರುನೇಮಕಾತಿಯೂ ಹೊಸ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
೨ ಐಐಟಿಗಳ ನಿರ್ದೇಶಕರನ್ನು ವರ್ಗಾವಣೆ ಮಾಡಿ ಬೇರೆ ಐಐಟಿಗಳಿಗೆ ನೇಮಿಸಲಾಗಿದೆ. ಐಐಟಿ ಭಿಲಾಯ್ ನಿರ್ದೇಶಕ ರಜತ್‌ಮೂನಾ, ಗಾಂಧಿನಗರದ ಐಐಟಿ ನಿರ್ದೇಶಕರಾಗಿ, ಧಾರವಾಡ ಐಐಟಿ ಪಸುಮರ್ತಿಶೇಷು ಗೋವಾ ಐಐಟಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
ಐಐಟಿ ಮದ್ರಾಸ್‌ನ ಪ್ರಾಧ್ಯಾಪಕರಾದ ಶೇಷಾದ್ರಿ ಶೇಖರ್ ಮತ್ತು ಶ್ರೀಪಾಲ್ ಕರ್ಮಾಲ್ಕರ್ ಅವರನ್ನು ಕ್ರಮವಾಗಿ ಪಾಲಕ್ಕಾಡಿ ಐಐಟಿ ಮತ್ತು ಭುವನೇಶ್ವರದ ಐಐಟಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಐಐಟಿ ಖರಗ್‌ಪುರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವೆಂಕಯ್ಯಪಯ್ಯ ಆರ್. ದೇಸಾಯಿ ಅವರನ್ನು ಐಐಟಿ ಧಾರವಾಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಐಐಟಿ ಬಿಹೆಚ್‌ಯುನ ಸ್ಕೂಲ್ ಆಫ್ ಮೆಟೀರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿಯ ರಾಜೀವ್ ಪ್ರಕಾಶ್‌ರನ್ನು ಭಿಲಾಯ್‌ನ ಐಐಟಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.ಭುವನೇಶ್ವರ್‌ನ ಐಐಟಿ ನಿರ್ದೇಶಕ ರಾಜ್‌ಕುಮಾರ್ ಅವರು ೫ ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ನಂತರ ಏಪ್ರಿಲ್-೨೦೨೦ ರಿಂದ ಪೂರ್ಣಪ್ರಮಾಣದ ನಿರ್ದೇಶಕರನ್ನು ನೇಮಿಸಲಾಗಿಲ್ಲ.
ಐಐಟಿ ತಿರುಪತಿಗೆ ಕೆ.ಎನ್. ಸತ್ಯನಾರಾಯಣ, ಜಮ್ಮು ಐಐಟಿಗೆ ಮನೋಜ್‌ಸಿಂಗ್ ಗೌರ್ ೨ನೇ ಅವಧಿಗೆ ಮರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಕಳೆದ ವರ್ಷ ಧಾರವಾಡ, ಗೋವಾ, ಪಾಲಕ್ಕಾಡ್, ಜಮ್ಮು, ಭಿಲಾಯ್ ಮತ್ತು ತಿರುಪತಿ ಸೇರಿದಂತೆ ೬ ಹೊಸ ಐಐಟಿಗಳ ನಿರ್ದೇಶಕರ ನೇಮಕಕ್ಕೆ ಶಿಕ್ಷಣ ಸಚಿವಾಲಯ ಅರ್ಜಿಗಳನ್ನು ಆಹ್ವಾನಿಸಿತ್ತು.