ಧಾರವಾಡ ಜಿಲ್ಲಾ ಮಟ್ಟದ ಜನತಾ ದರ್ಶನ: ಅಹವಾಲು ಸ್ವೀಕಾರ

ಧಾರವಾಡ, ಡಿ.24: ಧಾರವಾಡ ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರ ಅಧ್ಯಕ್ಷತೆಯಲ್ಲಿ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರಿಗೆ ಸುಮಾರು 177 ಅಹವಾಲುಗಳನ್ನು ಸಲ್ಲಿಸಿದರು.

ಇಲಾಖೆವಾರು ಸಲ್ಲಿಕೆಯಾದ ಅಹವಾಲುಗಳ ವಿವರ; ಇವುಗಳಲ್ಲಿ ಹೆಸ್ಕಾಂ 07, ಉದ್ಯೋಗ ಇಲಾಖೆ 03, ಸಹಕಾರಿ ಇಲಾಖೆ 03, ಸಾರಿಗೆ ಇಲಾಖೆ 03, ವಸತಿ ಇಲಾಖೆ 07, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 10, ಕಾರ್ಮಿಕ ಇಲಾಖೆ 05, ಶಾಲಾ ಶಿಕ್ಷಣ ಇಲಾಖೆ 10, ಲೋಕೋಪಯೋಗಿ ಇಲಾಖೆ 02, ಸಮಾಜ ಕಲ್ಯಾಣ ಇಲಾಖೆ 03, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 03, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ 04, ಆರೋಗ್ಯ ಇಲಾಖೆ 03, ಕ್ರೀಡಾ ಇಲಾಖೆ 03, ಅಲ್ಪಸಂಖ್ಯಾತರ ಇಲಾಖೆ 01, ಗೃಹ ಇಲಾಖೆ 03, ಮಹಿಳಾ ಮತ್ತು ಮಕ್ಜಳ ಅಭಿವೃದ್ದಿ ಇಲಾಖೆ 02, ಕನ್ನಡ ಮತ್ತು ಸಂಸ್ಕøತಿ ಇಲಾಖೆ 03, ಮಹಾನಗರಪಾಲಿಕೆ 44, ನೋಂದಣಿ ಇಲಾಖೆ 01, ಕಂದಾಯ ಇಲಾಖೆ 54 ಸೇರಿದಂತೆ ಒಟ್ಟು 177 ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು.

ಈ 177 ಅಹವಾಲುಗಳಲ್ಲಿ ತಾಲೂಕುವಾರು ಅಣ್ಣಿಗೇರಿ 03, ಧಾರವಾಡ 86, ಹುಬ್ಬಳ್ಳಿ ನಗರ 33, ಹುಬ್ಬಳ್ಳಿ ಗ್ರಾಮೀಣ 16, ಅಳ್ನಾವರ 02, ಕಲಘಟಗಿ 16, ಕುಂದಗೋಳ 08 ಮತ್ತು ನವಲಗುಂದದಿಂದ 13 ಅಹವಾಲುಗಳು ಸಲ್ಲಿಕೆ ಆಗಿವೆ.