(ಸಂಜೆವಾಣಿ ನ್ಯೂಸ್)
ಕುಂದಗೋಳ,ಅ11: ತಾಲುಕಿನ ಸಂಶಿ ಗ್ರಾ.ಪಂ ಅಧ್ಯಕ್ಷರು ಸದಸ್ಯರು ಧಾರವಾಡ ಜಿಪಂ ಸಿ.ಇ.ಓ ಶ್ರೀಮತಿ ಟಿ ಕೆ ಸ್ವರೂಪ ಅವರನ್ನು ಭೇಟಿಯಾಗಿ ಗ್ರಾಮವನ್ನು ಪಟ್ಟಣ ಪಂಚಾಯತ ಮೇಲ್ದರ್ಜೆಗೆ, ಹಾಗು ವಿಳಂಬಗೊಂಡ ಜೆ.ಜೆ.ಎಂ ಕಾಮಗಾರಿ, ಹೆಚ್ಚುವರಿ ಎಂ.ಜಿ.ಏನ್.ಆರ್.ಜಿ ಹಣ ಬಿಡುಗಡೆ ಮಾಡಲು ವಿನಂತಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ ರಾಜು ಪುಟ್ಟಣ್ಣನವರ ಮಾತನಾಡಿ ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷರು ಗೌರಮ್ಮ ಹರಕುಣಿ, ಅಲ್ತಾಫ್ ಮುಲ್ಲಾ,ಇರ್ಶಾದಅಹ್ಮದ, ದೇವೆಂದ್ರಪ್ಪ ಮುರೊಪಂತ,ಹಜರೇಸಾಬ ಪಠಾಣ್, ಯಲ್ಲವ್ವ ಭಜಂತ್ರಿ,ಶೋಭಾ ಗಡಗಿ,ನಿಂಗವ್ವ ಕುಮ್ಮಣ್ಣವರ, ಶಭಿನಾ ನಧಾಪ,ರವಿ ಸಾಳಂಕಿ, ಹುಬ್ಬಳ್ಳಿ,ಗಂಡಮಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.