ಧಾರವಾಡ: ಕೃತಿ ಬಿಡುಗಡೆ

ಧಾರವಾಡ,ಜೂ3: ಕರ್ನಾಟಕ ವಿದ್ಯಾವರ್ಧಕ ಸಂಘ 1892 ರಿಂದಲೇ ಅನೇಕ ಕನ್ನಡ ಕೃತಿಗಳನ್ನು ಪ್ರಕಟಿಸುತ್ತಲೇ ಬಂದಿದೆ. 100 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವುದು ಸಂತೋಷದ ಸಂಗತಿ. ಉಳಿದ ಎಲ್ಲ ಕೃತಿಗಳಿಂತ ಈ ಕೃತಿಕಿರೀಟ ಪ್ರಾಯವಾದದ್ದು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುವ ಕೃತಿ ಇದಾಗಿದೆ ಎಂದು ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರಕಟಿಸಿದ `ಸುಲಿದ ಬಾಳೆಯ ಹಣ್ಣಿನಂದದಿ’ ಪ್ರಾಚೀನಕನ್ನಡ ಕಾವ್ಯಗಳ ರಸಸ್ವಾದನೆಕೃತಿ ಬಿಡುಗಡೆ ಮಾಡಿ ಮಾತನಾಡಿದಅವರು.ಕನ್ನಡ ಸಾಹಿತ್ಯದಲ್ಲಿ ಪೂರ್ವಕ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಘಟ್ಟಗಳನ್ನು ಗುರುತಿಸಲಾಗಿದೆ.ಹಳಗನ್ನಡ ಸಾಹಿತ್ಯಕ್ಕೆಅದರದೇಆದ ಭವ್ಯ ಪರಂಪರೆಇದೆ.ಇಂತಹ ಪರಂಪರೆಯನ್ನು ಬಿಡುತ್ತಾ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಳಗನ್ನಡವೇ ಬೇಡಎನ್ನುವ ಮನಸ್ಸುಗಳು ಇಂದುಇರುವುದು ಸರಿಯಾದದ್ದಲ್ಲ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಾರಕ್ಕೊಂದುಉಪನ್ಯಾಸವಾಗಬೇಕು, ಕರ್ನಾಟಕ ವಿದ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ವಾಗ್ಭೂಷಣ ಪತ್ರಿಕೆ ನಿರಂತರವಾಗಿ ನಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
ಕೃತಿಯಕುರಿತು ಮಾತನಾಡಿದ ಶಾಂತಿನಾಥ ದಿಬ್ಬದಅವರು, ಒಳ್ಳೆಯ ಸಾಹಿತ್ಯಕೃತಿ ಹುಟ್ಟಿಬರಬೇಕಾದರೆ ಆ ಭೂಮಿಯ ಪುಣ್ಯಇರಬೇಕು. ಹಳೆ ಬೇರು, ಹೊಸ ಚಿಗುರುಕೂಡಿರಲು ಮರ ಸೊಬಗು ಎಂಬ ಮಾತಿನಂತೆ ಹಳಗನ್ನಡ , ಹೊಸಗನ್ನಡಕೂಡಿಕೊಂಡು ಬೆಳದಾಗಲೇ ಅದಕ್ಕೊಂದು ಸೊಬಗುಂಟು. ಭೂತವನ್ನು ಬಿಟ್ಟು ವರ್ತಮಾನವಿಲ್ಲ, ವರ್ತಮಾನವನ್ನು ಬಿಟ್ಟು ಭವಿಷ್ಯತ್‍ಇಲ್ಲ. ಹಿಂದೆ-ಇಂದು-ಮುಂದೆ ಮೂರುಕೂಡಿದಾಗಲೇ ಸಾಹಿತ್ಯಕ್ಕೊಂದು ಬೆಲೆ ಉಂಟು. ಹಳಗನ್ನಡದಲ್ಲಿ ಏನಿದೆಎಂದು ಕೇಳುವ ಬದಲು ಏನಿಲ್ಲ ಎಂದು ನೋಡುವ ಮನೋವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕಿದೆ. ಹಳೆಯ ಜ್ಞಾನಶಾಖೆಯನ್ನು ಕಡೆಗಣಿಸಿದರೆ ವೃದ್ದ ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳಿಸಿದಂತೆ. ಕಾವ್ಯರಚನೆಯಲ್ಲಿ ನಾಡಿನ ಸಂಸ್ಕøತಿಅಡಕವಾಗಿದೆ.ಕಾವ್ಯಕ್ಕೆ ಮೋಡಿ ಮಾಡುವ ಶಕ್ತಿಯಿದೆ.ಶ್ರದ್ಧೆ, ನಿರೀಕ್ಷೆಗಳನ್ನು ಇಟ್ಟುಕೊಂಡುಓದುವ ಹಂಬಲ ಬೇಕು.ಕಲಾ ವಸ್ತುವಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ಮಾತ್ರಕಾವ್ಯದ ಸ್ವಾದ ಸವಿಯಲು ಸಾಧ್ಯ.ಕಾವ್ಯರಸಾಸ್ವಾದನೆಗೆ ಹೃದಯ ಸಂವಾದ, ಸಂಸ್ಕಾರ ಬೇಕು.ಅಂದಾಗ ನಮ್ಮಅರಿವಿಗೆ ಬರಲಾರದೆಆನಂದಉಂಟಾಗುತ್ತದೆ.ಕಲ್ಪನೆಗಳ ಕಾರಣಗಳಿಂದ ಕಾವ್ಯಜನಪ್ರಿಯವಾಗುತ್ತದೆ.ಓದುಗರಲ್ಲಿ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಓದಿಸುವವರು, ಬೋಧಿಸುವವರು ಮಾಡಬೇಕಾದಅವಶ್ಯಇದೆಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿಅವರು ಸಭೆಗೆಗೌರವ ಬರುವದು ವೇದಿಕೆಯ ಮೇಲಿನ ಗಣ್ಯರಿಂದ ಮಾತ್ರವಲ್ಲ. ಕೇಳಲು ಬಂದ ಸಭೀಕರಿಂದಲೂ ಸಾಧ್ಯವಿದೆ.ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಶಕ್ತಿ ಸಾಹಿತ್ಯಕ್ಕಿದೆ.ಒಂದು ಮನೆಯಲ್ಲಿ ಮಗು ಜನಿಸಿದಾಗ ಯಾವರೀತಿಯ ಸಂತೋಷವಾಗುತ್ತದೆಯೋಅದೇರೀತಿಇಂದು ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಗೊಂಡ ಈ ಕೃತಿಯಿಂದ ಸಂತೋಷಉಂಟಾಗಿದೆಎಂದರು.
ಕೃತಿಯ ಸಂಪಾದಕರಾದ ವೆಂಟಕೇಶ ಮಾಚಕನೂರು ಮಾತನಾಡಿಕೃತಿ ಸಂಪಾದನೆಯಕುರಿತುತಮ್ಮಅನುಭವ ಹಂಚಿಕೊಂಡರು.
ವೇದಿಕೆಯಲ್ಲಿ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಹಾಗೂ ಸಹ ಸಂಪಾದಕಡಾ. ಚಿದಾನಂದ ಮಾಸನಕಟ್ಟಿ ಉಪಸ್ಥಿತರಿದ್ದರು. ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಕೆ.ಆರ್.ದುರ್ಗಾದಾಸ, ಪ್ರೊ. ಬಿ. ಎಸ್. ಶಿರೋಳ, ಕೆ.ಎಚ್.ನಾಯಕ, ಎಂ.ಎಂ.ಚಿಕ್ಕಮಠ, ನರಸಿಂಹ ಪರಾಂಜಪೆ, ಜಿ. ಸಿ.ತಲ್ಲೂರ, ನಿಂಗಣ್ಣಕುಂಟಿ, ಡಾ. ಡಿ.ಎಂ. ಹಿರೇಮಠ,ಶ್ರೀನಿವಾಸ ವಾಡಪ್ಪಿ, ಈರಣ್ಣಇಂಜನಗೇರಿ, ಹಳ್ಯಾಳ, ಎಸ್.ಎಂ.ದಾನಪ್ಪಗೌಡರ, ಮಾಂತೇಶ ನರೇಗಲ್ಲ, ಅಂಗಡಿ, ಶಿವಾನಂದ ಹೂಗಾರ ಸೇರಿದಂತೆಅನೇಕರು ಭಾಗವಹಿಸಿದ್ದರು.