ಧಾರವಾಡ ಅನಧಿಕೃತ ಅಂಗಡಿಗಳ ತೆರವು


ಧಾರವಾಡ,ನ.21: ನಗರದಲ್ಲಿ ಇಂದು ಹು-ಧಾ ಮಹಾನಗರ ಪಾಲಿಕೆಯು ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ನಡೆಸಿತು.
ಬೆಳ್ಳಂ ಬೆಳಿಗ್ಗೆ ನಗರದ ಸುಭಾಷ ರಸ್ತೆಯಲ್ಲಿ ಪಾಲಿಕೆ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಕೈಕೊಂಡಿತು.
ರಸ್ತೆಯಲ್ಲಿದ್ದ ಹೂವು, ಹಣ್ಣು ಇನ್ನಿತರ ಸಾಮಗ್ರಿ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವುದು ಸರಿಯಲ್ಲ, ಜೀವನ ನಡೆಸುವುದು ಹೇಗೆ ಎಂದು ಅಂಗಡಿಕಾರರಿಂದ ಆರೋಪ ವ್ಯಕ್ತವಾದವು.
ಈ ಕಾರ್ಯಕ್ಕೆ ಅಲ್ಲಿನ ವ್ಯಾಪಾರಸ್ಥರಿಂದ ಪ್ರತಿರೋಧ ವ್ಯಕ್ತವಾಯಿತಾದರೂ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.