ಧಾರವಾಡ ಅಣ್ಣಿಗೇರಿ ಶಿಕ್ಷಣ ಸಂಸ್ಥೆಯಿಂದಕಲಬುರಗಿ ವಿಭಾಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಿಯಾಯಿತಿ ಘೋಷಣೆ

ಆಳಂದ:ಎ.4: ಧಾರವಾಡದ ಹಳಿಯಾಳ ಮಾರ್ಗ ರೈಲ್ವೆಗೇಟ್ ತಪೋವನ್ ಬಳಿಯಿರುವ ಪ್ರತಿಷ್ಠಿತ ವಾಯ್. ಬಿ. ಅಣ್ಣಿಗೇರಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಪ್ರವೇಶ ಮತ್ತು ಸ್ಪಧಾತ್ಮಕ ಪರೀಕ್ಷೆಗಳ ತರಬೇತಿಗೆ ಪ್ರವೇಶ ಪಡೆಯುವ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಅಣ್ಣಿಗೇರಿ ಶಿಕ್ಷಣ ಸಂಸ್ಥೆಯೂ ವಿಶೇಷ ರಿಯಾಯಿತಿ ಘೋಷಿಸಿದೆ.

ಈ ಕುರಿತು ವಿವರಣೆ ನೀಡಿದ ಧಾರವಾಡ ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಹಾಗೂ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ ವೈ. ಅಣ್ಣಿಗೇರಿ ಅವರು ಮಾತನಾಡಿ, 10-12ನೇÀ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುರಿಸಾಧನೆ ಮತ್ತು ಸ್ಪಧಾತ್ಮಕ ಪರೀಕ್ಷೆಗಳ ಸಾಮಥ್ರ್ಯ ವೃದ್ಧಿಗೆ ಪ್ರವೇಶ ಪಡೆಯುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ವಸತಿ, ಊಟದ ಸೌಲಭ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ಕೇವಲ ಹಣಗಳಿಕೆ ನಮ್ಮ ಉದ್ದೇಶವಲ್ಲ. ಸಾಮಾಜಿಕ ಹೊಣೆಗಾರಿಕೆ ಉದ್ದೇಶವಿಟ್ಟು ಆರಂಭಿಸಿದ ಅಣ್ಣಿಗೇರಿ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿ ರಾಜ್ಯ, ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗೇರಿದ್ದು ಸಂಸ್ಥೆಗೆ ಹೆಮ್ಮೆ ತಂದಿದೆ. ಅಲ್ಲದೆ, ರಾಜ್ಯದ 30 ಜಿಲ್ಲೆಗಳಿಂದಲೂ ಕನಿಷ್ಠ 10 ವಿದ್ಯಾರ್ಥಿಗಳಾದರು ಪ್ರತಿವರ್ಷ ಪ್ರವೇಶ ಪಡೆದು ಸಾಧಕರಾಗಿ ಹೊರಹೊಮ್ಮುವುದು ಸಂಸ್ಥೆಯಲ್ಲಿನ ನುರಿತ ಮತ್ತು ಅನುಭವಿ ಸಿಬ್ಬಂದಿಗಳ ಪರಿಶ್ರಮವೇ ಕಾರಣ ಎಂದರು.

ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಶಾಖೆ ಆರಂಭಿಸುವಂತೆ ಕಲಬುರಗಿ ಭಾಗದಿಂದಲೂ ಸಾಕಷ್ಟು ಬೇಡಿಕೆ ಬರುತ್ತಿದೆ, ಇಲ್ಲಿನವರು ನಮ್ಮ ಸಂಸ್ಥೆಯ ಮೇಲಿಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗೆ ಮರೆಯಲಾಗದು, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಸಾಕಷ್ಟು ದೂರದಿಂದ ಬಂದು ಧಾರವಾಡ ಅಣ್ಣಿಗೇರಿ ಸಂಸ್ಥೆಯಲ್ಲಿ ಪ್ರವೇಶ ಪಡೆದು ಪರೀಕ್ಷಾ ಪೂರ್ವ ತಯಾರಿಮಾಡಿ ಸ್ಪರ್ಧಾ ಪರೀಕ್ಷೆಗಳಲ್ಲಿ ಸಾಧಕರಾಗಿ ಸಂಸ್ಥೆಯ ಕೀರ್ತಿ ತಂದಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಪ್ರವೇಶ ಬಯಸಿ ಬರುವವರಿಗೆ ಸ್ಪರ್ಧಾ ಪೈಪೋಟಿ ಎದುರಿಸುವ ಸಾಮಥ್ರ್ಯ ವೃದ್ಧಿಗೆ ಬಡ ಮುತ್ತು ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಹೊರೆಯಾಗದಂತೆ ಸಂಸ್ಥೆಯಿಂದ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಅಣ್ಣಿಗೇರಿ ಸಂಸ್ಥೆ ಎನ್‍ಇಇಟಿ, ಮೆಡಿಕಲ್, ಫೌಂಡೇಷನ್, ಜೆಇಇ, ಐಐಟಿ ಮತ್ತು ಕೆ-ಸಿಇಟಿ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ 10ನೇ ತರಗತಿ ಮತ್ತು ಪಿಯು ವಿಜ್ಞಾನ ಮತ್ತು ವಾಣಿಜ್ಯ -ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಕರೆದು, ತರಗತಿ ಆರಂಭಿಸಲಾಗುತ್ತಿದೆ, ವಿದ್ಯಾರ್ಥಿಗಳು ಇದರ ಲಾಭಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಏ.23ಕ್ಕೆ ಪ್ರವೇಶ ಪರೀಕ್ಷೆ:

2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ (ಸ್ಟೇಟ್)ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆ ಏಪ್ರೀಲ್ 23ರಂದು ಬೆಳಗಿನ 11ಗಂಟೆಗೆ ಪಠ್ಯಕ್ರಮ ಅನುಸಾರ ಅಣ್ಣಿಗೇರಿ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಶೇ 60ಕ್ಕಿಂತ ಹೆಚ್ಚು ಅಂಕಪಡೆಯುವ ವಿದ್ಯಾರ್ಥಿಗಳಿಗೆ ಶೇ 20ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ವಿದ್ಯಾರ್ಥಿಗಳು ಮತ್ತು ಪಾಲಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ ನಿರಂತರವಾಗಿ ಸ್ಪಧಾತ್ಮಕ ಪರೀಕ್ಷೆಯ ತಯಾರಿ ಕುರಿತು ನಡೆಸುವ ತರಬೇತಿಗೂ ರಿಯಾಯಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಮಹಾಬಲೇಶ್ವರ, ಆಡಳಿತ ವಿಭಾಗದ ಸಚೀನ, ಅರುಣಕುಮಾರ ನೂಲಿ, ಕ.ಕ. ವಿಭಾಗದ ಪಾಲಕ ಪ್ರತಿನಿಧಿ ಸೂರ್ಯಕಾಂತ ಮೂಲಗೆ ಮತ್ತಿತರು ಇದ್ದರು.