ಕಲಬುರಗಿ,ಏ.21-ಅಬಕಾರಿ ಇಲಾಖೆ ಅಧಿಕಾರಿಗಳು ಅಫಜಲಪುರ ತಾಲ್ಲೂಕಿನ ಭಾಸಗಿ ಕ್ರಾಸ್‍ನಲ್ಲಿರುವ ಧಾಭಾ ಮೇಲೆ ದಾಳಿ ನಡೆಸಿ 28.080 ಲೀಟರ್ ಮದ್ಯ ಮತ್ತು 15.600 ಲೀಟರ್ ಬೀಯರ್ ಜಪ್ತಿ ಮಾಡಿ ಧಾಭಾ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.