ಧರ್ಮ ಸ್ಥಳ ಸಂಸ್ಥೆ 7 ಆಕ್ಸಿಜನ್ ಕಾನ್ಸನ್ ಟ್ರೇಟರ್ ವಿತರಣೆ

ಜಗಳೂರು.ಜೂ.೩: ಧರ್ಮಸ್ಥಳ ಸಂಸ್ಥೆಯ ಧರ್ಮಾಧಿಕಾರಿಗಳಾದ ವೀರೇಂದ್ರಹೆಗ್ಗಡೆಯವರು ಸಾಮಾಜಿಕವಾಗಿ ಜನರ ಹಿತ ದೃಷ್ಠಿಯಿಂದ ಕೋರೋನಾ ಸಂದರ್ಭದಲ್ಲಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ 7 ಆಕ್ಸಿಜನ್ ಕಾನ್ಸನ್ ಟ್ರೇಟರ್ ಸಾರ್ವಜನಿಕ ಆಸ್ಪತ್ರೆಗೆ ನೀಡುತ್ತಿರುವುದಕ್ಕೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಪ್ರಶಂಸೆ ವ್ಯಕ್ತಪಡಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ 7 ಆಕ್ಸಿಜನ್ ಕಾನ್ಸನ್ ಟ್ರೇಟರ್, ಪೋಲೀಸ್ ಇಲಾಖೆ ವತಿಯಿಂದ 2 ಆಕ್ಸಿಜನ್ ಕಾನ್ಸನ್ ಟ್ರೇಟರ್‌ನ್ನು ಆಸ್ಪತ್ರೆ ಸಮರ್ಪಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿಯೇ ಆಮ್ಲಜನಕ ಉತ್ಪನ್ನ ಮಾಡುವ ಘಟಕವನ್ನು ಸುಮಾರು 80 ಲಕ್ಷಗಳಲ್ಲಿ ವೀಕಡ್ ಕ್ಲೀನ್ ಮ್ಯಾಚ್ ಕಂಪನಿಯು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಮಾಡಲಾಗುತ್ತಿದೆ . ಆಮ್ಲಜನಕ ಉತ್ಪನ್ನ ಘಟಕವನ್ನು ಸ್ಥಾಪನೆ ಮಾಡಿದರೆ ಆಮ್ಲಜನಕ ಉತ್ಪಾದನೆ ಘಟಕದಿಂದ ಆಮ್ಲಜನಕ ಕೊರತೆ ನೀಗಿಸಿ ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ದೊರೆತು ಅನುಕೂಲಕರವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಮ್ಮ, ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್, ಸಿಪಿಐ ಮಂಜುನಾಥ್‌ಪಂಡಿತ್, ಪಿಎಸ್‌ಐ ಸಂತೋಷ್ ಬಾಗೋಜಿ, ಆಸ್ಪತ್ರೆಯ ವೈದ್ಯಾಧಿಕಾರಿ ನಾಗರಾಜ್, ವೈದ್ಯರಾದ ಮಲ್ಲಪ್ಪ, ನಾಗರಾಜ್, ಪ.ಪಂ.ಸದಸ್ಯರಾದ ಮಂಜುಳಾ, ನವೀನ್, ದೇವರಾಜ್,ಮಂಜಣ್ಣ, ಮುಖಂಡರಾದ ಹನುಮಂತಪ್ಪ, ಶಿವಣ್ಣ, ಅಫೀಜ್,ಓಬಣ್ಣ, ವಕೀಲ ತಿಪ್ಪೇಸ್ವಾಮಿ, ಧರ್ಮ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.