ಧರ್ಮ ಸಂಸ್ಕøತಿ ಕಲೆಯಲ್ಲಿಯೂ ಅಡಗಿದೆ:ಗುಂಡಕನಾಳಶ್ರೀ

ತಾಳಿಕೋಟೆ:ಸೆ.21: ನಮ್ಮ ಹಿಂದೂ ಧರ್ಮದ ತಳಹದಿಯಲ್ಲಿ ಭರತನಾಟ್ಯ, ಸಾಂಸ್ಕøತಿ ವಿವಿಧ ಕಲೆಗಳಲ್ಲಿಯೂ ಅಡಗಿದ್ದರಿಂದ ಸನಾತನ ಧರ್ಮ ಸಂಸ್ಕøತಿ ಜೀವಂತಿಕೆ ಉಳಿಯಲು ಸಾಧ್ಯವಾಗಿದೆ ಇದರ ಅಡಿಯಲ್ಲಿ ಧರ್ಮ ಜಾಗೃತಿಯ ಅನೇಕ ಕಾರ್ಯಕ್ರಮಗಳು ದೇಶದೆಲ್ಲಡೆ ಇನ್ನೂ ಹೆಚ್ಚಿಗೆ ನಡೆಯಬೇಕಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಬುಧವಾರರಂದು ಪಟ್ಟಣದ ತಿಲಕ ರಸ್ತೆಯ ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ಆಯೋಜಿಸಲಾದ ಸಾಂಸ್ಕøತಿ ಕಾರ್ಯಕ್ರಮಗಳ ಉದ್ಗಾಟನೆ ಮತ್ತು ಹಿಂದೂ ಸಮಾಜದ ಮುಖಂಡರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ಹಿಂದೂ ಧರ್ಮದ ಸಂಸ್ಕøತಿ, ಆಚಾರ, ವಿಚಾರಗಳು ದೇಶದೆಲ್ಲಡೆ ಇನ್ನೂ ಪಸರಿಸಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಸನಾತನ ಧರ್ಮದ ಸಂಸ್ಕøತಿಯ ಉಳಿವಿಕೆ ಮತ್ತು ಬೆಳೆಸುವಿಕೆಯ ಬಗ್ಗೆ ಹಿಂದೂ ಸಮಾಜವನ್ನು ಜಾತಿ ರಹೀತವಾಗಿ ಒಂದೂಗೂಡಿಸುವಂತಹ ಕಾರ್ಯದೆಡೆಗೆ ನಾವೇಲ್ಲರೂ ಸಾಗಬೇಕಿದೆ ಇಂದಿನ ದಿನಮಾನದಲ್ಲಿ ಸನಾತನ ಧರ್ಮದ ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಕುಚೇಷ್ಠಿರೂಪದಲ್ಲಿ ಮಾತನಾಡುತ್ತಿರುವದನ್ನು ಎಲ್ಲರೂ ಗಮನಿಸಿದ್ದೇವೆ ಅಂತಹ ವ್ಯಕ್ತಿಗಳನ್ನು ತಿದ್ದುವಂತಹ ಕಾರ್ಯದ ಜೊತೆಗೆ ಹಿಂದೂ ಧರ್ಮ ರಕ್ಷಣೆಗಾಗಿ ಮತ್ತು ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆಯೂ ಅಷ್ಟೇ ಮುಖ್ಯವಾಗಿದೆ ಎಂದ ಶ್ರೀಗಳು ಹಿಂದೂ ಮಹಾ ಗಣಪತಿ ಮಂಡಳಿ ಎಂಬುದು ವಿಶಿಷ್ಠವಾದ ಹೆಸರು ಪಡೆದಿದೆ ಎಲ್ಲಡೆಯು ವಿವಿಧ ಗಜಾನನ ಮಂಡಳಗಳನ್ನು ರಚಿಸಿಕೊಂಡು ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾ ಬಂದಿರುವದನ್ನು ನಾವು ಕಾಣುತ್ತೇವೆ ಆದರೆ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೇಲೆಯ ಅರೀತುಕೊಂಡು ಈ ಹಿಂದೂ ಮಹಾ ಗಣಪತಿ ಮಂಡಳಿ ಕಟ್ಟಿಕೊಂಡು ಸುಮಾರು 10 ವರ್ಷಗಳಿಂದ ಸಮಾಜಿಕ ಸಾಮರಸ್ಯಕ್ಕಾಗಿ ಮತ್ತು ಹಿಂದೂ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ನಮ್ಮ ದೇಶದ ಸಂಸ್ಕøತಿಯನ್ನು ಉಳಿಸುವ ಕೋಸ್ಕರ ಸುಮಾರು 10 ವರ್ಷಗಳಿಂದ ಯಾವುದೇ ಸ್ವಾರ್ಥ ವಿಚಾರವಿಲ್ಲದೇ ಧರ್ಮವನ್ನು ಮುಂದೆ ತರಬೇಕು ಧರ್ಮದ ಪ್ರಚಾರ ಮಾಡಬೇಕೆಂಬ ವಿಷಯವನ್ನಿಟ್ಟುಕೊಂಡು ಸಾಗಿದ್ದಾರೆ ಈ ಧರ್ಮ ರಕ್ಷಣೆ ಕಾರ್ಯಕ್ಕೆ ತಾಳಿಕೋಟೆ ಮಹಾ ನಗರದ ಜನರು ಸಾಕಷ್ಟು ಸಹಕರಿಸುವದರೊಂದಿಗೆ ಪ್ರೋತ್ಸಾಹಿಸುತ್ತಾ ಬಂದಿರುವದು ಸಂತಸ ತಂದಿದೆ ಎಂದ ಅವರು 9 ದಿನಗಳ ಕಾಲ ವಿವಿಧ ಹಿಂದೂ ಧರ್ಮದ ರಕ್ಷಣೆಗೆ ಸಂಬಂದಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಗಿರುವದು ಹೆಮ್ಮೆಯ ಸಂಗತಿ ಎಂದರು.
ಇನ್ನೋರ್ವ ಕೆಸರಟ್ಟಿ ಶ್ರೀ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು ಮಾತನಾಡಿ ಧರ್ಮ ರಕ್ಷಣೆಗಾಗಿ ನಿತ್ಯ ಧರ್ಮ ಜಾಗೃತಿ ಜನರಲ್ಲಿ ಮೂಡಿಸುವದು ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತಹದ್ದು ಸಂಸ್ಕಾರವನ್ನು ಬೆಳೆಸಿ ಅದಕ್ಕೆ ಪೂರಕವಾದಂತಹ ನೃತ್ಯ ಕಾರ್ಯಕ್ರಮ, ಸ್ಪರ್ದಾತ್ಮಕ ಕಾರ್ಯಕ್ರಮ ಸಾಂಸ್ಕøತಿಕ ಕಾರ್ಯಕ್ರಮ, ಮನರಂಜನೆ ಕಾರ್ಯಕ್ರಮಗಳನ್ನು ಒಳಗೊಂಡು ವಿಶೇಷ ಕಾರ್ಯಕ್ರಮಗಳನ್ನು ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ಮಾಡುತ್ತಾ ಬರಲಾಗಿದೆ 9 ದಿನಗಳ ಕಾಲ ಈ ಹಬ್ಬದ ಆಚರಣೆಯಲ್ಲಿ ಧರ್ಮದ ರಕ್ಷಣೆ ಮತ್ತು ಧರ್ಮದ ಸಂಸ್ಕಾರಕ್ಕೆ ಒಳಪಟ್ಟಂತ ಭಕ್ತಿ ಗೀತೆಗಳನ್ನು ಮತ್ತು ಧರ್ಮ ಪ್ರಸಾರಕ ಗೀತೆಗಳನ್ನು ಬಳೆಸುತ್ತಿರುವದು ಅತ್ಯಂತ ವಿಶೇಷವಾಗಿದೆ ಇನ್ನೂ ಗಣೇಶ ಉತ್ಸವದಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಚಿತ್ರಗೀತೆಗಳಿಗೆ ಮತ್ತು ಪಟಾಕ್ಷೀ ಹಚ್ಚುವದನ್ನು ಸಂಪೂರ್ಣ ನಿಷೇದ ಹೇರುವದರ ಜೊತೆಗೆ ಧರ್ಮ ರಕ್ಷಣೆಗೆ ಅವಶ್ಯವಾದ ಮತ್ತು ಹಿಂದೂ ಧರ್ಮದ ಪ್ರಸಾರ ಉಳ್ಳ ಗೀತೆಗಳನ್ನು ಬಳೆಸುತ್ತಿರುವದು ಇನ್ನೂ ವಿಶೇಷ ಇಂತಹ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದನ್ನು ಎಲ್ಲ ನಮ್ಮ ಹಿಂದೂ ಸಮಾಜ ಬಾಂದವರು ಸದ್ಭಳಿಕೆ ಮಾಡಿಕೊಳ್ಳಬೇಕೆಂದು ಹೇಳಿದ ಶ್ರೀಗಳು ಹಿಂದೂ ಮಹಾ ಗಣಪತಿ ಮಂಡಳಿಯ ದಶಮಾನೋತ್ಸವದ ಸಂಭ್ರಮದಲ್ಲಿ 9 ದಿನಗಳ ಕಾಲ ಅನ್ನ ಪ್ರಸಾದದ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ನೃತ್ಯ, ಕಲೆ,ಯ ಬೀಡಾಗಿರುವ ಈ ನಮ್ಮ ಭಾರತ ಪುಣ್ಯಭೂಮಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳ ಜೊತೆಗೆ ಹಿಂದೂ ರಾಷ್ಟ್ರವಾಗಿ ಹೊರ ಹೊಮ್ಮಲು ಎಲ್ಲರೂ ಕೈಜೋಡಿಸುವಂತಹ ಕಾರ್ಯ ಮಾಡಬೇಕೆಂದರು.
ಇನ್ನೋರ್ವ ರಡ್ಡಿ ಸಮಾಜದ ಮುಖಂಡರು ಹಾಗೂ ಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಮಾತನಾಡಿ ಇಂದಿನ ದಿನಮಾನದಲ್ಲಿ ಪೂಜೆ ಪುನಃಸ್ಕಾರಗಳು ಉಳಿಸಿ ಬೆಳೆಸಬೇಕಿದೆ ಅದರ ಜೊತೆಗೆ ಸನಾತನ ಧರ್ಮ ನಮ್ಮನ್ನು ಇಲ್ಲಿಯವರೆಗೆ ರಕ್ಷಣೆ ಮಾಡುತ್ತಾ ಬಂದಿದ್ದು ಅಂತಹ ಸನಾತನ ಧರ್ಮ ಮತ್ತು ಹಿಂದೂ ರಕ್ಷೀಸುವಂತಹ ಕಾರ್ಯ ಎಲ್ಲರೂ ಸೇರಿ ಮಾಡಬೇಕಿದೆ ಎಂದರು.
ಸಾಂಸ್ಕøತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.
ಇದೇ ಸಮಯದಲ್ಲಿ ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ವಿವಿಧ ಸಮಾಜದ ಮುಖಂಡರುಗಳಿಗೆ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಯಿತು.
ವೇದಿಕೆಯ ಮೇಲೆ ಹಿಂದೂ ಮಹಾ ಗಣಪತಿ ಮಂಡಳಿಯ ಗೌರವ ಕಾರ್ಯದರ್ಶಿ ಸಂತೋಷಬಟ್ ಜೋಶಿ, ಶ್ರೀನಿವಾಸ ಸೋನಾರ, ರವಿ ತಾಳಪಲ್ಲೆ, ಸಿದ್ರಾಮಪ್ಪ ಹೂಗಾರ, ಲಕ್ಷ್ಮಣ ಕಲಾಲ, ಹರಿಸಿಂಗ್ ಮೂಲಿಮನಿ, ಮಲ್ಲಿಕಾರ್ಜುನ ಮೇಟಿ, ರಮೇಶ ಮೂಕೀಹಾಳ, ಶಂಕರ ನಾಯಕ, ನೀಲಕಂಠ ಬಬಲೇಶ್ವರ, ರಾಜಶೇಖರ ವಿಜಾಪೂರ, ಸುಭಾಸ ಬಿಳೇಭಾವಿ, ಶಿವಾಜಿ ಸೂರ್ಯವಂಶಿ, ಭೀಮರಾಯ ಕುಲಕರ್ಣಿ, ಸಂಬಾಜಿ ವಾಡಕರ, ಮಲ್ಲಾರಿ ದರ್ಜಿ, ಬಸವರಾಜ ಅಗಸರ, ವಜ್ರಕುಮಾರ ಪ್ರಥಮಶೆಟ್ಟಿ, ಅನೀಲ ಹಡಪದ, ಶ್ರೀರಂಗ ಅಗರವಾಲಾ, ಚಂದ್ರು ಚಿತಾಪೂರ, ಎಚ್.ಎಸ್.ಪಾಟೀಲ, ಈರಣ್ಣ ಕಲ್ಬುರ್ಗಿ, ಪ್ರಕಾಶ ಸಾಸಾಬಾಳ, ಜಗದೀಶ ಬಿಳೇಭಾವಿ, ಗಣೇಶ ಗುರ್ಜಲಕರ, ಪ್ರಭು ಕೊಡೇಕಲ್ಲ, ಮೊದಲಾದವರು ಇದ್ದರು.
ಇಂದು ಸಂತ ಸಮಾವೇಶ :- ದಿ.21 ರಂದು ಬೆಳಿಗ್ಗೆ 10-15 ಕ್ಕೆ ಪ್ರಭಂದ ಸ್ಪರ್ದೆ ಕಾರ್ಯಕ್ರಮ ನಡೆಯಲಿದ್ದು ಸಾಯಂಕಾಲ 6-15ಕ್ಕೆ ನಾಡಿನ ವಿವಿಧ ಮಠಾಧೀಶರ ಸಂತರ ಸಮ್ಮುಖದಲ್ಲಿ ಸಂತ ಸಮಾವೇಶ ನಡೆಯಲಿದೆ ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಡಾ.ಹಣಮಂತ ಮಳಲಿ ಅವರು ಆಗಮಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.