
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.14 :- ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿದ್ದು ಇದನ್ನು ಉಳಿಸಲು ಧರ್ಮ ಸಂಸ್ಕೃತಿ ಬೆಳೆಸಬೇಕು ಅದರ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಿದಲ್ಲಿ ಈ ದೇಶದ ಪರಿಪೂರ್ಣ ಸತ್ಪ್ರಜೆಯಾಗಬಲ್ಲ ಎಂದು ಕಣ್ವಕುಪ್ಪೆ ಗವಿಮಠದ ಡಾ: ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪಾಲಕ ಪೋಷಕರು ಹಾಗೂ ಶಿಕ್ಷಕರಿಗೆ ಕರೆ ನೀಡಿದರು.
ಅವರು ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಶ್ರೀ ವೇದಮೂರ್ತಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಅಡಿಯಲ್ಲಿ ಸರ್ ಎಂ ವಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತ ಮಕ್ಕಳು ತಿನ್ನುವ ಆಹಾರದ ಬಗ್ಗೆ ಸಹ ಎಚ್ಚರ ವಹಿಸಬೇಕು
ಜಂಗ್ ಫುಡ್ ಮಕ್ಕಳ ಆರೋಗ್ಯ ವನ್ನು ಹದಗೆಡಿಸಿ ಆರೋಗ್ಯ ಹಾಳುಮಾಡುತ್ತದೆ ಇದರಿಂದಾಗಿ ಮನೆಯಲ್ಲಿ ರಾಗಿ ಜೋಳ ಮುಂತಾದ ಸಿರಿಧಾನ್ಯಗಳ ಆಹಾರ ಸೇವಿಸಲು ಸಲಹೆ ನೀಡಿದರು.
ಸಹಕಾರ ಇಲಾಖೆಯ ಲೆಕ್ಕಪರಿಶೋಧಕ ಡಿ ಬಸಟೆಪ್ಪ ಮಾತನಾಡಿ ಮಕ್ಕಳು ಮುಗ್ಧ ಜೀವಿಗಳು ಅವರನ್ನು ಉತ್ತಮ ದಾರಿಯಲ್ಲಿ ಕರೆದೊಯ್ಯುವ ಕೆಲಸ ಪಾಲಕರು ಪೋಷಕರು ಹಾಗೂ ಶಾಲಾಶಿಕ್ಷಕರದ್ದಾಗಿದೆ. ಈಗ ನಾನು ಉನ್ನತ ಅಧಿಕಾರಿಯಾಗಿದ್ದರು, ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕ ಆಗಿದ್ದಾಗ ಮಕ್ಕಳ ಜೊತೆಗಿನ ಒಡನಾಟ ತುಂಬಾ ಖುಷಿ ಕೊಡುತ್ತದೆ ಎಂದು ಶಿಕ್ಷಕ ವೃತ್ತಿಯ ಸಂತಸದ ಕ್ಷಣದ ನೆನಪನ್ನು ಮೆಲುಕು ಹಾಕಿದರು.
ಎಸ್ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ಕೆ ತಿಪ್ಪೇಸ್ವಾಮಿ, ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ಎಂ ರವಿಕುಮಾರ್, ನಿವೃತ್ತ ಪ್ರಾಚಾರ್ಯ ಕೆ ಜಂಬುನಾಥ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಸ್
ಶೇಖರಪ್ಪ, ಹಾರಕಭಾವಿ ಗ್ರಾಮಪಂಚಾಯಿತಿ ಅಧ್ಯಕ್ಷ ಹೆಚ್ ಬಿ ಮುನಿಯಪ್ಪ ಉಪಾಧ್ಯಕ್ಷ ಡಿ ಶೇಖರ್, ಚಿತ್ರದುರ್ಗದ ಮಕ್ಕಳ ತಜ್ಞ ಡಾ.ಅರುಣ್ ಕುಮಾರ್ ಪಿ, ಇನ್ನಿತರರು ಭಾಗವಹಿಸಿದ್ದರು,
ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು, ಟ್ರಸ್ಟಿನ ಕಾರ್ಯದರ್ಶಿಗಳು ಸದಸ್ಯರು ಹಾಜರಿದ್ದರು, ಗೌರವಾಧ್ಯಕ್ಷರಾದ, ಎಸ್ ಕೊಟ್ರೇಶ್ ಸ್ವಾಗತಿಸಿದರು, ವಕೀಲರಾದ ಎಂ ಟಿ ರೇವಣಸಿದ್ದಪ್ಪ ಪ್ರಾಸ್ತಾವಿಕ ನುಡಿ ನುಡಿದರು, ಶಿಕ್ಷಕ ಎ ಯರಿಸ್ವಾಮಿ ನಿರೂಪಿಸಿದರು, ಶಿಕ್ಷಕ ಕೆ ಎಸ್ ಪ್ರಕಾಶ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.