ಧರ್ಮ-ರಾಜಕೀಯಕ್ಕಿಂತ ಶ್ರೇಷ್ಠ:ಚಿದಂಬರ

ತಾಳಿಕೋಟೆ:ಜು.14: ಸಾಧು ಸಂತರೆಂದರೆ ಭಾರತೀಯರಿಗೆ ಪೂಜ್ಯನೀಯಭಾವ ಅಂತಹ ಕಾರ್ಯಗಳಿಂದ ಭಕ್ತೋದ್ದಾರ ಜನ್ನೋದ್ದಾರ ಮಾಡುತ್ತಾ ಸಾಗಿಬಂದಂತಹ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಇತ್ತಿಚಗೆ ನಡೆದಂತಹ ಹತ್ಯ ತಲೆ ತಗ್ಗಿಸುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯಪುರ ವಿಭಾಗದ ಪೂಜ್ಯ ಸಂಘಟನಾ ಸಂಚಾಲಕರಾದ ಚಿದಂಬರ ಕರಮರಕರ ಅವರು ನುಡಿದರು.

ಗುರುವಾರರಂದು ಸ್ಥಳೀಯ ದಿಗಂಬರ ಜೈನ ಸೇವಾ ಟ್ರಸ್ಟ ಹಾಗೂ ಪಟ್ಟಣದ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಜೈನ ಮುನಿ ಮಹಾರಾಜರ ಹತ್ಯ ಕುರಿತು ಖಂಡಿಸಿದ ನಡೆಸಿದ ಮೌನ ಪ್ರತಿಭಟನಾ ಮೆರವಣಿಯಲ್ಲಿ ಮಾತನಾಡುತ್ತಿದ್ದ ಅವರು ಕಳೆದ ಹತ್ತಾರು ವರ್ಷಗಳಿಂದ ದೇಶದ ಪರಸ್ಥಿತಿಗೆ ಬಣ್ಣ ಬೇರೆ ಕೊಟ್ಟು ರಾಜಕೀಯ ಸ್ವರೂಪದಲ್ಲಿ ಧರ್ಮ ಬೇರೆ ಮಾಡುವಂತಹ ಹುನ್ನಾರಗಳು ನಡೆದಿವೆ ಹೀಗಾಗಿ ಇಂತಹ ದುಸ್ಕøತ್ಯಗಳು ನಡೆಯಲು ಕಾರಣವಾಗಿವೆ ಎಂದರು. ಧರ್ಮ ದೇಶ ಒಂದು ಆತ್ಮವಿದ್ದಂತೆ ರಾಜಕೀಯ ವ್ಯವಸ್ಥೆ ಬಿಟ್ಟರೆ ಸರ್ವಸ್ವವಲ್ಲಾ ಆದರೆ ಧರ್ಮ ರಾಜಕೀಯಕ್ಕಿಂತ ಶ್ರೇಷ್ಠವಾದದ್ದೆಂಬುದನ್ನು ಅರೀತುಕೊಂಡು ನಡೆದಿದ್ದು ಇಂದು ನಡೆದ ಸಾಂತ್ವಾನ ಸಭೆಯಾಗಿರಬಹುದು ಮನಸ್ಸಿನಲ್ಲಿ ಮಾತ್ರ ಎಲ್ಲರಲ್ಲಿ ಶ್ರೀಗಳಿಗಾದ ಸ್ಥಿತಿಯನ್ನು ನೋಡಿ ಮನಸ್ಸುಗಳು ವಿದ್ವಿಗ್ನಗೊಂಡಿವೆ ಅಲ್ಲದೇ ಕಳವಳ ದುಃಖಕೂಡಾ ಆಗಿದೆ ಈ ವ್ಯವಸ್ಥೆಯಿಂದ ಎಲ್ಲರಲ್ಲಿ ಆಕ್ರೋಶವೂ ಕೂಡಾ ಇದೆ ಆದರೆ ಶಾಂತಿವಾದಿ ಇರುವದರಿಂದಲೇ ಇಂದು ಇಡೀ ಮೇರವಣಿಗೆಯನ್ನು ಶಾಂತಿಯುತವಾಗಿ ಕೈಕೊಳ್ಳಲಾಗಿದೆ ಎಂದರು. ಜೈನ ಸಮಾಜ ಭಾರತದ ಪರಂಪರೆಯಂತೆ ಧರ್ಮದ ಅಡಿಪಾಯದಲ್ಲಿಯೇ ಕಾರ್ಯಕ್ರಮ ಮಾಡಲಾಗಿದೆ ಮುನಿ ಶ್ರೇಷ್ಠರ ಹತ್ಯ ನಡೆದಿರುವದು ಖಂಡನೀಯವಾಗಿದೆ ಎಂದ ಅವರು ಸಮಾಜ ಸುಧಾರಣೆ ಮಾಡುವಂತಹ ಭಕ್ತರನ್ನು ಉದ್ದರಿಸುವಂತಹ ವ್ಯಕ್ತಿಗಳನ್ನು ಕೊಲ್ಲುವದೆಂದರೆ ಇದು ಸಮಾಜಕ್ಕೆ ಸೂಚನೆಯ ಘಂಟೆಯಾಗಿ ಪರಿಣಮಿಸಿದೆ ಆದರೂ ಶ್ರೀಗಳ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ಯಾವುದೇ ಸರ್ಕಾರವಿರಲಿ ಆ ಸರ್ಕಾರ ಕರ್ನಾಟಕ ಸರ್ಕಾರದ್ದಾಗಿದೆ ಕಾರಣ ಇಂತಹ ಕೃತ್ಯಗಳು ನಡೆಯಬಾರದೆಂಬ ಉದ್ದೇಶದಿಂದಲೇ ಇಂದು ರಾಜ್ಯಪಾಲರಿಗೆ ಮನವಿ ರವಾನಿಸುತ್ತೇವೆಂದರು.

ಇನ್ನೋರ್ವ ಪುರಸಭಾ ಸದಸ್ಯರಾದ ಜೈಸಿಂಗ್ ಮೂಲಿಮನಿ ಅವರು ಮಾತನಾಡಿ ಅಕ್ಷರವನ್ನು ಕಲಿಸುವದು ಆಶ್ರಯ ಇಲ್ಲದವರಿಗೆ ಆಶ್ರಯ ನೀಡುವಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದ ಜೈನ ಮುನಿಯನ್ನು ಹತ್ಯ ಮಾಡಿರುವದನ್ನು ನಾವು ಬಲವಾಗಿ ಖಂಡಿಸುತ್ತೇವೆಂದರು. ಇರುವೆಯನ್ನು ನೋಯಿಸದಂತಹ ಶ್ರೀಗಳನ್ನು ಹತ್ಯ ಗೈದಿರುವ ಉಗ್ರಗಾಮಿ ಕೃತ್ಯವನ್ನು ಖಂಡಿಸುತ್ತೇವೆ ಇದೇ ರೀತಿ ಮುಂದುವರೆದರೆ ಬೇರೆ ರೂಪ ತಾಳಬೇಕಾಗುತ್ತದೆ ಎಂದು ಏಚ್ಚರಿಸಿದರು.

ಇನ್ನೋರ್ವ ಪುರಸಭಾ ಸದಸ್ಯ ವಾಸುದೇವ ಹೆಬಸೂರ ಅವರು ಮಾತನಾಡಿ ಸರ್ಕಾರ ಬೇಗನೇ ಏಚ್ಚೆತ್ತುಗೊಂಡು ಶ್ರೀಗಳ ಹತ್ಯ ಮಾಡಿದವರಿಗೆ ಯೋಗ್ಯ ಶಿಕ್ಷೆ ನೀಡುವ ಕಾರ್ಯವಾಗಬೇಕು ಮರಣದಂಡನೆಯಾಗಲಿ ಅಥವಾ ಗಲ್ಲು ಶಿಕ್ಷೆಯನ್ನು ನೀಡಲು ಮುಂದಾಗಬೇಕೆಂದು ಆಗ್ರಹಿಸಿದ ಅವರು ಸಾಧು ಸಂತರ ಪರಸ್ಥಿತಿ ಹೀಗೆಯಾಗಿದೆ ಎಂದರೆ ಅನ್ಯರ ಪರಸ್ಥಿತಿ ಹೇಗೆ ಎಂದು ಘಟನೆ ಕುರಿತು ಖಂಡಿಸಿದರು.

ಇದೇ ಸಮಯದಲ್ಲಿ ರಾಜ್ಯ ಪಾಲರಿಗೆ ಬರೆದ ಮನವಿ ಪತ್ರವನ್ನು ತಹಶಿಲ್ದಾರರ ಸಹಾಯಕರಾದ ಎಂ.ಎಂ.ಅತ್ತಾರ ಅವರಿಗೆ ನೀಡಲಾಯಿತು.

ಕಾರ್ಯಕ್ರಮದ ಮೊದಲಿಗೆ ಜೈನ ಸಮಾಜದ ಜೈನ ಬಸದಿಯಿಂದ ಕಪ್ಪುಬಟ್ಟೆ ಧರಿಸಿದ ಎಲ್ಲ ಪ್ರತಿಭಟನಾಕಾರರು ಮೌನ ಪ್ರತಿಭಟನಾ ಮೇರವಣಿಗೆಯೊಂದಿಗೆ ರಾಜವಾಡೆ, ಪಂಚಸೈಯದ ದರ್ಗಾ, ಕತ್ರಿ ಭಜಾರ, ಬಾಲಾಜಿ ಮಂದಿರ ರಸ್ತೆ, ಶ್ರೀ ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸವೇಶ್ವರ ವೃತ್ತದ ಮೂಲಕ ತಹಶಿಲ್ದಾರ ಕಚೇರಿಗೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಈ ಮೇರವಣಿಗೆಯ ನೇತೃತ್ವವನ್ನು ದಿಗಂಬರ ಜೈನ ಸೇವಾ ಟ್ರಸ್ಟನ ಅಧ್ಯಕ್ಷ ಪದ್ಮರಾಜ ಧನಪಾಲ, ಉಪಾಧ್ಯಕ್ಷ ವಜ್ರಕುಮಾರ ಪ್ರಥಮಶೆಟ್ಟಿ, ಕಾರ್ಯದರ್ಶಿ ಪ್ರಭು ಗೋಗಿ, ಕುಲಭೂಷಣ ಹುಬ್ಬಳ್ಳಿ, ಕಸ್ತೂರಿ ಪ್ರಥಮಶೆಟ್ಟಿ, ಮೋಹನ ಧನಪಾಲ, ಎ.ಬಿ.ಇರಾಜ, ಗುಂಡುರಾವ್ ಧನಪಾಲ, ಸಂತೋಷ ಪ್ರಥಮಶೆಟ್ಟಿ, ಎಸ್.ಬಿ.ಗೊಂಗಡಿ, ರತ್ನಪ್ಪ ಶಿಸಪ್ಪ ಪ್ರಥಮಶೆಟ್ಟಿ, ಮಹಾವೀರ ಪ್ರಥಮಶೆಟ್ಟಿ, ಎಸ್.ಆರ್.ಹುಬ್ಬಳ್ಳಿ, ಸಿ.ಎಸ್.ಗೋಗಿ, ಬಾಹುಬಲಿ ಸುರಪೂರ, ಪದ್ಮರಾಜ ಯಾಥಗಿರಿ, ಬಸವಕುಮಾರ ಶಿರಸಿ, ಹಾಗೂ ಆಲಗೂರ ಗ್ರಾಮದ ಮಹಾವೀರ ಶಿರಶ್ಯಾಡ, ಅಶೋಕ ರತನೇಕಾರ, ಮಹಾವೀರ ಯಾಥಗಿರಿ, ಜೈಪಾಲ ಯಾಥಗಿರಿ, ರಾಜಕುಮಾರ ವರ್ದಮಾನ, ಶ್ರೀಪಾಲ ಸಂಗ್ಮಿ, ಬರಮಣ್ಣ ಸುರಪೂರ, ಪದ್ಮಣ್ಣ ಯಾಥಗಿರಿ, ಬಳಗಾನೂರದ ಕಾಳಪ್ಪ ದಂಡಾವತಿ, ಸುರೇಶ ಗೋಗಿ, ಮೋಹನಚಂದ ಚೌದ್ರಿ, ಬರಮಣ್ಣ ಯಾಥಗಿರಿ, ಚಂದು ಧನಪಾಲ, ಮೋಹನ ಕವಡೇಕರ, ಹಾಗೂ ತಾಳಿಕೋಟೆಯ ಪುರಸಭಾ ಸದಸ್ಯರಾದ ಅಣ್ಣಾಜಿ ಜಗತಾಪ, ಮೋಹನ ಬಡಿಗೇರ, ಡಿ.ವ್ಹಿ.ಪಾಟೀಲ, ಹಾಗೂ ಪ್ರಕಾಶ ಕಟ್ಟಿಮನಿ, ಬಾಬು ಹಜೇರಿ, ಭವನಸಿಂಗ್ ಹಜೇರಿ, ಮೋಹನ ಅಂಬಿಗೇರ, ಗೋಪಿನಾಥ ಬೇದರಕರ, ಕಾಶಿನಾಥ ಸಜ್ಜನ, ಮಂಜು ಶೆಟ್ಟಿ, ಸಂಬಾಜಿ ವಾಡಕರ, ವಿಠ್ಠಲ ಮೋಹಿತೆ, ಪ್ರಕಾಶ ಸಾಸಾಬಾಳ, ಹಾಗೂ ಜೈನ ಸಮಾಜದ ಮಹಿಳೆಯರು ಮೊದಲಾದವರು ವಹಿಸಿದ್ದರು.

ಪ್ರಕಾಶ ಸುರಪೂರ ನಿರೂಪಿಸಿ ವಂದಿಸಿದರು.