ಧರ್ಮ ಮತಾಂತರಿತಗಳ ಪರಿಶಿಷ್ಟ ಪಂಗಡ : ಸೌಲಭ್ಯ ನಿಲ್ಲಿಸಲು ಒತ್ತಾಯ

ರಾಯಚೂರು.ನ.21-ಧರ್ಮ ಮತಾದರಿತ ವ್ಯಕ್ತಿಗಳನ್ನು ಪರಿಶಿಷ್ಟ ಪಂಗಡ ಸೂಚಿಯಿಂದ ತೆಗೆದು ಹಾಕುವುದು ಹಾಗೂ ಅವರಿಗೆ ಪರಿಶಿಷ್ಟ ಪಂಗಡಗಳಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ಗಿರಿಜನ ಸುರಕ್ಷಾ ವೇಧಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಬಿಹಾರದ ಗಿರಿಜನ ನಾಯಕ ಆದ ಆಗಿನ ಸಂಸದ ಮತ್ತು ಕೇಂದ್ರಿಯ ಮಂತ್ರಿ ದಿ.ಕಾರ್ತಿಕ ಉರಾಂ ಪರಿಶಿಷ್ಟ ಪಂಗಡ ಸೂಚಿಯಿಂದ ಧರ್ಮ ಮತಾಂತರಿತ ಪರಿಶಿಷ್ಟ ಪಂಗಡದ ವ್ಯಕ್ತಿಗಳನ್ನು ತೆಗೆದು ಹಾಕುಬೇಕು ಎಂದರು.
ಅವರಿಗೆ ಪರಿಶಿಷ್ಟ ಪಂಗಡಗಳು ಸಲ್ಲಬೇಕಾದ ಸೌಲಭ್ಯಗಳನ್ನು ನಿಲ್ಲಿಸುವುದರ ಬಗ್ಗೆ ಜ್ಞಾಪಕ ಪತ್ರವನ್ನು ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರಿಗೆ ಸಲ್ಲಿಸಿ ೫೦ ವರ್ಷ ಕಳೆದಿವೆ ಎಂದು ತಿಳಿಸಿದರು.
ಅವರು ಬಿಸ್ ವರ್ಷ ಕೀ ಕಾಲೀ ರಾತ್ ಎಂಬ ಪುಸ್ತಕವನ್ನು ಮುದ್ರಿಸುವುದರ ಮೂಲಕ ವ್ಯಕ್ತಪಡಿಸಿದ್ದಾರೆ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಆದೇಶಗಳು ಮಸೂದೆ ೧೯೬೭ ಇದರ ಜಂಟಿ ಸಂಸದೀಯ ಸಮಿತಿಯ ಬೆಂಬಲಕ್ಕಾಗಿ ೨೩೫ ಲೋಕಸಭಾ ಸದಸ್ಯರು ಈ ಜ್ಞಾಪಕ ಪತ್ರವನ್ನು ಸಹಿ ಮಾಡಿದ್ದರು ತಿದ್ದುಪಡಿ ಮಾಡಿ ಸಮಿತಿಯ ಶಿಫಾರಸು ಮಾಡಿ ಪತ್ರದಲ್ಲಿ ಅಳವಡಿಸಲಾಗಿದೆ‌ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ ಚಿಂತಲಕುಂಟ, ಚಂದ್ರಶೇಖರ್ ನಾಯಕ ಸೇರಿದಂತೆ ಅನೇಕರು ಇದ್ದರು. ಸಲ್ಲಿಸಿದರು.