ಧರ್ಮ ಭಾಷೆ ಜಾತಿರಹಿತ ಶತಮಾನೋತ್ಸವದ ಸಂಘಟನೆ ಎಐಟಿಯುಸಿ

ಜಗಳೂರು.ಏ.೧೮; ವೇದ ಉಪನಿಷತ್ತು ಧರ್ಮ ಗ್ರಂಥಗಳಿಗಿಂತ ಶ್ರೇಷ್ಠವಾಗಿರುವ ಮನುಕುಲದ ಏಕತೆ ಸಾರುವ  ದೇಶದ ಪವಿತ್ರ ಗ್ರಂಥ  ಸಂವಿಧಾನದ ಉಳಿವಿಗಾಗಿ ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದು ಎ ಐ.ಟಿ.ಯು.ಸಿ ಜಿಲ್ಲಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪ್ರೇರಣ ಚರ್ಚ್ ಸಭಾಂಗಣದಲ್ಲಿ  ಎಐಟಿಯುಸಿ ವತಿಯಿಂದ ಹಮ್ಮಿಕೊಂಡಿದ್ದ 5 ನೇ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.ಹಿಂದು ಧರ್ಮದಲ್ಲಿನ ವರ್ಣಬೇದ ನೀತಿಗಳಿಂದ ಹಾಗೂ  ದಲಿತರ,ಮಹಿಳೆಯರ ಮೇಲಿನ ಶೋಷಣೆ,ಕಂದಾಚಾರ,ಮೌಢ್ಯತೆಗಳಿಂದ ಬೇಸತ್ತು ಬಾಬಾಸಾಹೇಬರು ಬೌದ್ದ ಧರ್ಮಕ್ಕೆ‌ಮತಾತಂತರ ಹೊಂದಿದರು.ದೇಶದಲ್ಲಿ ಅಲ್ಪ ಸಂಖ್ಯೆಯಲ್ಲಿರುವ ಬ್ರಾಹ್ಮಣರ ಕಪಿಮುಷ್ಟಿಯಲ್ಲಿ ಹಿಂದು ಧರ್ಮವಿದೆ.ಬಹುಸಂಖ್ಯಾತರಾಗಿರುವ ಶೂದ್ರರಿಗೆ ಶೋಷಣೆ ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರು ಏಷ್ಯಾದಲ್ಲಿಯೇ ಹಲವು  ಉನ್ನತ ಶಿಕ್ಷಣ ಪದವಿ ಪಡೆದವರು ಅಲ್ಲದೆ ಬ್ರಿಟೀಷರಿಂದ ಭಾರತೀಯರನ್ನು ರಕ್ಷಿಸಿದ   ನ್ಯಾಯವಾದಿ,ಅರ್ಥಶಾಸ್ತ್ರಜ್ಞ,ಸಮಾಜ ಸುಧಾರಕ
ರರಾಗಿದ್ದರು.ಭಾರತ ರತ್ನ ಬಾಬಾಸಾಹೇಬರನ್ನು ಜಾತಿಗೆ ಸೀಮಿತವಾಗೊಳಿಸಿ ತಿರಸ್ಕಾರ ಭಾವನೆಯಿಂದ ಸಮಾಜದಲ್ಲಿ ಮನುವಾದಿಗಳು ಕಂಡಿದ್ದರು. ಇಂದು ಪ್ರತಿಯೊಬ್ಬರೂ ಸ್ಮರಿಸಿ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.ಇದೇ ವೇಳೆ ಫಾದರ್ ವಿಲಿಯಂ ಮಿರಾಂದ , ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು,ಬಳ್ಳಾರಿ ಜಿಲ್ಲಾ ಎ.ಐ.ಟಿ.ಯು.ಸಿ  ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾದ್ಯಕ್ಷ ಲಕ್ಷ್ಮಣ,ಸಹಕಾರ್ಯದರ್ಶಿ ಶಾರದಮ್ಮ,ತಾಲೂಕು ಅಧ್ಯಕ್ಷ ಮಹಮ್ಮದ್ ಭಾಷ,ಪದಾಧಿಕಾರಿಗಳಾದ ವಿಶಾಲಾಕ್ಷಿ,ವೀರಣ್ಣ ಮಾದಿಹಳ್ಳಿ ಕೆ.ಮಂಜಪ್ಪ, ಭಾಗವಹಿಸಿದ್ದರು.