ಧರ್ಮ ನಾಯಕ್ ತಾಂಡಾದಲ್ಲಿ ಅಬಕಾರಿ ದಾಳಿ: ಕಳ್ಳಬಟ್ಟಿ ಸಾರಾಯಿ ಜಪ್ತಿ

ಕಲಬುರಗಿ,ಮಾ.16-ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಚಿತ್ತಾಪುರ ತಾಲ್ಲೂಕಿನ ಧರ್ಮ ನಾಯಕ್ ತಾಂಡಾದಲ್ಲಿ ದಾಳಿ ನಡೆಸಿ 120 ಲೀಟರ್ ಬೆಲ್ಲದ ಕೊಳೆ, ಐದು ಲೀಟರ್ ನವಸಾಗರ ಮತ್ತು ಎರಡು ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.
ಆರೋಪಿ ಪರಾರಿಯಾಗಿದ್ದು, ಮೊನಾಬಾಯಿ ಗಂಡ ಮೂನು ಚವ್ಹಾಣ್ ವಿರುದ್ಧ ಅಬಕಾರಿ ನೀರಿಕ್ಷಕರಾದ ಗೋಪಾಲ ಪಂಡಿತ್ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.