ಧರ್ಮ ಜಾತಿ ಹೆಸರಿನಲ್ಲಿ ಜನರ ಐಕ್ಯತೆ ಒಡೆಯುವ ಪ್ರಯತ್ನ: ಸಿಪಿಎಂ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,26- ಸಿಪಿಎಂ ಪಕ್ಷದ  ಜಿಲ್ಲಾ ಮಟ್ಟದ ಕಾರ್ಯಗಾರವನ್ನ ನಗರದ ಗಾಂಧಿ ಭವನದಲ್ಲಿ ನಿನ್ನೆ ನಡೆಸಲಾಯಿತು.
ಪಕ್ಸದ ರಾಜ್ಯ ಸಮತಿ ಸದಸ್ಯ ಎಸ್. ವೈ. ಗುರುಶಾಂತ್ ಅವರು  23 ನೇ ಸಿಪಿಎಂ ಪಕ್ಷದ ಸಮ್ಮೇಳನದ ವರದಿ ಮತ್ತು  ಪ್ರಮುಖ ತೀರ್ಮಾನಗಳ  ವಿವರಣೆ  ನೀಡಿದರು.
ಕೇಂದ್ರ ದಲ್ಲಿ ಅಧಿಕಾರ ನಡೆಸುತ್ತಿರುವ  ಬಿಜೆಪಿ ಆರ್ ಎಸ್ ಎಸ್ ನಿಯಂತ್ರಣದಲ್ಲಿ ಇದ್ದು.  ಕೋಮವಾದದ ಅಜಂಡಗಳನ್ನು ಜಾರಿ ಅದು ಮಾಡಲು ಮುಂದಾಗಿದೆ.  ಧರ್ಮ, ಜಾತಿ ಹೆಸರಿನಲ್ಲಿ ಜನರ ಐಕ್ಯತೆಯನ್ನು ಒಡಿಯಲು ಪ್ರಯತ್ನಸಿದೆಂದು ಆರೋಪಿಸಿದರು.
ಅಗತ್ಯ ವಸ್ತು ಗಳ ಬೆಲೆ ಏರಿಕೆ ಜಿಎಸ್ ಟಿಯನಗನು ಎಲ್ಲಾ ಅಗತ್ಯ ವಸ್ತು ಗಳ ಮೇಲೆ ಹಾಕಿದ್ದು. ಕಾರ್ಮಿಕರು ರೈತರು ಮಹಿಳೆಯರು ಬದುಕು ದುಸ್ತರವಾಗುತ್ತಿದೆಂದರು.
ಪಕ್ಷವನ್ನು ವಿಸ್ತರಣೆ ಮಾಡಲು ಹಲವು ಕಾರ್ಯಕ್ರಮ ಳು ಜಾರಿ ಮಾಡಲು ಮುಂದಾಗಳು ಯೋಜನೆಗಳು ಜಾರಿ ಮಾಡಲು ಪಕ್ಷ ಕರೆ ನೀಡಿದ್ದು.  ಕಾರ್ಮಿಕ, ರೈತ,ಮಹಿಳಾ, ದಲಿತ, ಯುವಜನ ರಂಗಗಳ ಸದಸ್ಯರನ್ನು ಹೆಚ್ಚಿಸಲು  ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯ ಬಾಬು ಮಾತನಾಡಿ, ಮಾರ್ಕ್ ವಾದಿ ಸಿದ್ಧಾಂತದ ಅಡಿಯಲ್ಲಿ ಪಕ್ಸದ ಎಲ್ಲಾ ಸದಸ್ಯರು ಪಕ್ಷ ವನ್ನು ವೇಗವಾಗಿ ಬಲಿಷ್ಠ ವಾಗಿ ಬೆಳಸಲು ಎಲ್ಲಾ ಕಾರ್ಯಕರ್ತರು  ಜನರ  ಸಮಸ್ಯೆಗಳ ಪರಿಹಾರಕ್ಕಾಗಿ ಜನವಿರೋಧಿ ನೀತಿಗಳ ವಿರುದ್ಧ ಚಳುವಳಿಗಳು ಬೆಳಸಲು ಕರೆ ನೀಡಿ, ಮುಂದಿನ ಚುನಾವಣೆ ಗಳಲ್ಲಿ ಬಿಜೆಪಿ ಪಕ್ಷ ವನ್ನು ಸೋಲಿಸಲು ಪಕ್ಷ ಸಿದ್ಧತೆ ನಡೆಸಲು ಕರೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಿ. ಎಸ್. ಶಿವ ಶಂಕರ್ ಅಧ್ಯಕ್ಷತೆವಹಿಸಿದ್ದರು. ಎಚ್ ತಿಪ್ಪಯ್ಯ,ಜೆ. ಚಂದ್ರ ಕುಮಾರಿ, ಕಾರ್ಯ ದರ್ಶಿ ಮಂಡಳಿ ಸದಸ್ಯರು ವೇದಿಕೆ ಮೆಲೆ ಇದ್ದರು.