
ಮಾನ್ವಿ,ಮಾ.೨೬- ಸಹಬಾಳ್ವೆಯ ಸಂಕೇತವೇ ರಾಯಚೂರು ಭಾಗವಾಗಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮುಖವಾಡದ ಬದುಕಿನೊಂದಿಗೆ ಜೀವನ ಸಾಗಿಸುವುದೇ ಬದುಕಾಗಿರುತ್ತದೆ.
ಆದರೆ ಈ ಕಡು ಬಿಸಿಲಿನಲ್ಲಿ ಕಡಕ್ ರೊಟ್ಟಿ ತಿನ್ನುವ ಸಾಹಿತ್ಯ ಮನುಷ್ಯರಲ್ಲಿ ಕಲಬೆರಕೆ ಎಂದು ಮೂಡದಿರಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ಹೆಚ್ಚಾಗುತ್ತಿದೆ. ಅವುಗಳನ್ನು ಮೀರಿ ಸಾಹಿತ್ಯ ಅಕ್ಷದ ಮೂಲಕ ಕ್ರಾಂತಿ ಮೂಡಿಸುವುದು ಹಾಗೂ ಅಸಲಿ ಸಾಹಿತಿಗಳು ಗುರುತಿಸಿ ಗೌರವಿಸುವ ಕೆಲಸ ಈ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹಿರಿಯ ಸಾಹಿತಿ ಉದ್ಘಾಟಕರಾದ ಜಿಪಿ ಬಸವರಾಜ ಮೈಸೂರು ಹೇಳಿದರು.
ಪಟ್ಟಣದ ನೂತನ ಟೌನ್ ಹಾಲಿನಲ್ಲಿ ಪ್ರಪ್ರಥಮ ಕಾರ್ಯಕ್ರಮವಾಗಿರುವ ಬೊಮ್ಮನಾಳ ಬಾಲನಗೌಡ ಸ್ಮಾರಕ ದತ್ತಿ ಸಂಸ್ಥೆಯ ದ್ವೀತಿಯ ವರ್ಷದ ರಾಜ್ಯ ಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತಾನಾಡಿದರು.
ಪ್ರಾಸ್ತಾವಿಕವಾಗಿ ಯುವ ಸಾಹಿತಿ ರಾಜ್ಯ ಅಕಾಡೆಮಿ ಪುರಸ್ಕೃತ ಸುಮೀತ್ ಮೇತ್ರಿ ಪ್ರಾಸ್ತಾವಿಕವಾಗಿ ಮಾತಾನಾಡಿ ಅಕ್ಷರ ಸಾಹಿತ್ಯ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಕಲೆ ಸಂಸ್ಕೃತಿ, ಸಾಧನೆಯನ್ನು ಮಾಡಿದವರನ್ನು ಗುರುತಿಸಬೇಕಾಗಿದೆ ಯಾವುದೇ ಬರಹಗಾರರು ನಾನು ಸಾಹಿತಿ ನಾನು ಸಾಹಿತಿ ಎನ್ನುವ ಬದಲಾಗಿ ಇವನು ಸಾಹಿತಿ ಎನ್ನುವ ರೀತಿಯಲ್ಲಿ ನಾವು ಸಾಧನೆ ಮಾಡಬೇಕು ಹಾಗೂ ಯಾವುದೇ ಸಂಸ್ಥೆಗಳು ಪುರಸ್ಕಾರ ನೀಡುವುದಾರೆ ತಮ್ಮ ಹಿಂಬಾಲಕರನ್ನು ಮಾತ್ರ ಪರಿಗಣಿಸಿ ಸನ್ಮಾನಿಸುವುದು ವಾಡಿಕೆಯಾಗಬಾರದು ಎಂದರು.
ನಂತರ ದ್ವೀತಿಯ ವರ್ಷದ ಬೊಮ್ಮನಾಳ ಬಾಲನಗೌಡ ಸ್ಮಾರಕ ಸಾಹಿತ್ಯ ಪುರಸ್ಕಾರ ಕಥಾ ವಿಭಾಗದಲ್ಲಿ ಹೊಗೆಯ ಹೊಳೆಯಿದು ತಿಳಿಯದು ಎನ್ನುವ ಕೃತಿಯ ಚಿದಾನಂದ ಸಾಲಿಯವರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಗದು ಹತ್ತು ಸಾವಿರ ಹಾಗು ಕವನ ವಿಭಾಗದಲ್ಲಿ ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್ ಕೃತಿಗೆ ಹಾಗೂ ಸಿದ್ದು ಸತ್ಯಣ್ಣನವರ ಇವರ ಗಾಳಿಯ ಮಡಲಿ ಕೃತಿಗೆ ಪುರಸ್ಕಾರದ ಜೊತೆಗೆ ನಗದು ಐದು ಸಾವಿರ ನೀಡಿ ಗೌರವಿಸಲಾಯಿತು.
ನಂತರ ಸಂಸ್ಥೆಯ ಅಧ್ಯಕ್ಷ ಡಾ ಯಂಕನಗೌಡ ಪಾಟೀಲ ಬೊಮ್ಮನಾಳ, ಸಂಸ್ಥೆಯ ಸಂಚಾಲಕ ಪತ್ರಕರ್ತ ಬಸವರಾಜ ಬೋಗವತಿ ಮಾತಾನಾಡಿ ಸಂಸ್ಥೆಯ ಬೆಳವಣಿಗೆ ಹಾಗೂ ಕೃತಿಯ ಆಯ್ಕೆ ಕಾರ್ಯಕ್ರಮದ ನಿಯೋಜನೆ ಕುರಿತು ಮಾತಾನಾಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳೊಂದಿಗೆ ಪ್ರಾರ್ಥನಾ ಸಂಸ್ಥೆಯನ್ನು ಬೆಳೆಸಲಾಗುತ್ತದೆ ಎಂದರು. ನಂತರ ವೇದಿಕೆಯ ಮೇಲಿದ್ದ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿ.ಎಸ್ ಗೋರವರ ಮಾಸ ಪತ್ರಿಕೆ ಸಂಪಾದಕರು ಧಾರವಾಡ, ಎಂ.ಎ. ಪಾಟೀಲ ನಿವೃತ್ತ ಸಹಾಯಕ ಅಭಿಯೋಜಕರು ಮಾನ್ವಿ, ಮಧುಪಾಂಡೆ ನಿಟಕಪೂರ್ವ ಅಧ್ಯಕ್ಷರು ಮಹಿಳಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು, ಸತ್ಯನಾರಾಯಣ ಮೂಸ್ಟೂರು, ಈರಣ್ಣ ಮರ್ಲಟ್ಟಿ ಸೇರಿದಂತೆ ಅನೇಕರು ಇದ್ದರು.