ಧರ್ಮ ಜಾಗೃತಿಯಲ್ಲಿ ರೇಣುಕಾಚಾರ್ಯರ ಮಹತ್ವ ಅತಿ ಹೆಚ್ಚಿನದಾಗಿದೆ: ಬದ್ದೇಪಲ್ಲಿ

ಸೈದಾಪುರ:ಮಾ.27:ಮಾನವೀಯ ಮೌಲ್ಯಗಳನ್ನು ಒಳಗೊಂಡ ಅರ್ಥವತ್ತಾದ ಧಾರ್ಮಿಕ ಆಚರಣೆಗಳ ಧರ್ಮ ಜಾಗೃತಿಯಲ್ಲಿ ಪ್ರಯತ್ನಿಸಿದ ಜಗದ್ಗುರು ರೇಣುಕಾಚಾರ್ಯರ ಮಹತ್ವ ಅತಿ ಹೆಚ್ಚನದಾಗಿದೆ ಎಂದು ಹಿರಿಯ ಮುಖಂಡರಾದ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಹೇಳಿದರು.
ಇಲ್ಲಿನ ವಲಯ ಶ್ರೀ ವೀರಮಹೇಶ್ವರ ಜಂಗಮ ಕ್ಷೇಮಭೀವೃದ್ಧಿ ಸಂಘದ ವತಿಯಿಂದ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವವಹಿಸಿ ಮಾತನಾಡಿದರು. ತಮ್ಮದೆಯಾದ ತಪ್ಪಸ್ಸಿನ ಸಾಧನೆಗಳೊಂದಿಗೆ ಧಾರ್ಮಿಕ ಕೇಂದ್ರಗಳನ್ನು ಅಸ್ಥಿತ್ವಕ್ಕೆ ತಂದು ನೊಂದವರ ಪಾಲಿಗೆ ಆಸರೆಯಾಗಿ ಜಗದ್ಗುರು ರೇಣುಕಾಚಾರ್ಯರರು ಕಾರ್ಯ ನಿರ್ವಹಿಸಿದರು. ಅವರ ತತ್ವಗಳ ಸಾರವನ್ನು ತಿಳಿದು ಸೇವಾ ಮನೋಭಾವನೆಯೊಂದಿಗೆ ಸಮಾಜದ ಅಭಿವೃದ್ದಿಗೆ ಪ್ರಯತ್ನಿಸಿದಾಗ ಜಯಂತಿಯ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಇದಕ್ಕೂ ಮುಂಚೆ ನೂತನ ಗ್ರಾ.ಪಂ.ಸದಸ್ಯರಾದ ಸುಜಾತ ಚನ್ನಬಸ್ಸಯ್ಯ ಸ್ವಾಮಿ ದುಪ್ಪಲ್ಲಿ, ಶರಣಬಸವ ಹಿರೇಮಠ ಕೂಡಲೂರ ಹಾಗೂ ರಾಜಶೇಖರ ಸ್ವಾಮಿ ಚೇಗುಂಟಾ, ನಾಗರಾಜ ಸ್ವಾಮಿ ಇವರನ್ನು ಸನ್ಮಾನಿಸಲಾಯಿತು.