ಧರ್ಮ ಉಳಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದು

ಮಧುಗಿರಿ, ಜು.೧೪- ದೇವಾಲಯಗಳು ಹಿಂದೂ ಸಂಪ್ರದಾಯ ಮತ್ತು ಧರ್ಮವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮಧು ಜಿಡಿ ಪಾಳ್ಯ ಹೇಳಿದರು.
ತಾಲ್ಲೂಕಿನ ದೊಡ್ಡದಾಳವಟ್ಟ ಗ್ರಾಮದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇವಾಲಯ ಪುರಾತನವಾಗಿದ್ದು ಈ ದೇವಾಲಯಕ್ಕೆ ತನ್ನದೆಯಾದ ಇತಿಹಾಸವಿದೆ. ಇಂತಹ ಪುರಾತನ ದೇವಸ್ಥಾನ ಅಭಿವೃದ್ಧಿ ಆಗುತ್ತಿರುವುದು ಸಂತಸದ ವಿಷಯ ಎಂದರು.
ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ತನು-ಮನ ನೀಡಬೇಕು.ಅದೇ ರೀತಿ ಸ್ಥಿತಿವಂತರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಬೇಕೆಂದು ಮನವಿ ಮಾಡಿದರು.
ದೇವತಾರಾಧನೆ, ದೇವರ ಪೂಜೆ, ಧ್ಯಾನದಿಂದ ಮನುಷ್ಯನಿಗೆ ನೆಮ್ಮದಿ ಸಿಗುತ್ತದೆ. ದೇವಾಲಯಗಳು ಮನುಷ್ಯನ ಭಾವನೆಗಳಿಗೆ ನೆಮ್ಮದಿಯ ತಾಣವಾಗಿವೆ ಎಂದರು.
ದೇವಾಲಯಗಳಿಂದ ಪ್ರತಿಯೊಬ್ಬರಲ್ಲೂ ಶಾಂತಿ, ನೆಮ್ಮದಿ ಮೂಡುತ್ತದೆ. ಪ್ರತಿ ಗ್ರಾಮಗಳಲ್ಲಿ ದೇವಸ್ಥಾನ ಶಾಲೆ ಅವಶ್ಯಕವಾಗಿದೆ. ಮಧು ಚಾರಿಟಬಲ್ ಟ್ರಸ್ಟ್ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರಕ್ಕೂ ಒತ್ತು ನೀಡಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.