
ಅಥಣಿ :ಮಾ.2: ಧರ್ಮ ಉಳಿದರೆ ಮಾತ್ರ ಲೋಕದ ಕಲ್ಯಾಣವಾಗುತ್ತದೆ. ಮುನಿ ಮಹಾರಾಜರನ್ನು ನೋಡುವದೇ ಒಂದು ಸೌಭಾಗ್ಯ. ಅವರ ಆಶೀರ್ವಾದ ಫಲಕ್ಕಿಂತ ಹೆಚ್ಚಿನದು ಯಾವುದು ಇಲ್ಲಾ ಎಂದು ಮಾಜಿ ಡಿಸಿಎಂ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು,
ಅವರು ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಉತ್ಸವದ ಮೂರನೇ ದಿನ ಬುಧವಾರ ನಡೆದ ರಾಜ್ಯಾಭಿಷೇಕ ಮತ್ತು ದಿಕ್ಷಾ ಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜೀವನದಲ್ಲಿ ಹಣ, ಆಸ್ತಿ, ಅಂತಸ್ತು ಕ್ಷಣಿಕ, ಸತ್ಸಂಗ, ಪ್ರವಚನ ಹಾಗೂ ಪಂಚಕಲ್ಯಾಣ ಮಹೋತ್ಸವದಂತ ಧಾರ್ಮಿಕ ಕಾರ್ಯಕ್ರಮಗಳು ಶಾಸ್ವತ ಸುಖ ನೀಡುತ್ತವೆ. ಮಾನವ ಜನ್ಮ ದೊಡ್ಡದು ಅದನ್ನು ವ್ಯರ್ಥ ಮಾಡಿಕೊಳ್ಳಬಾರದು. ಮುನಿಮಹಾರಾಜರ ಸಂದೇಶಗಳು ಜೀವನದಲ್ಲಿ ಬೆಳಕು ನೀಡುವ ಸಾಧನಗಳಾಗಿವೆ. ಅವರ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮನು ಸಂಚಾರ ಮಾಡಿದ ಈ ರಾಮತೀರ್ಥ ಗ್ರಾಮದಲ್ಲಿ ಪಂಚಕಲ್ಯಾಣ ಮಹೋತ್ಸವ ವೈಭವ ಪೂರಿತವಾಗಿ ಜರುಗುತ್ತೀರುವದು ಸ್ಮರಣೀಯ ಹಾಗೂ ಐತಿಹಾಸಿಕವಾಗಿದೆ. ಜೈನ ಸಮಾಜಕ್ಕೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೊಲ್ಹಾಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡಿ, ಜೈನ ಧರ್ಮದಲ್ಲಿ ತ್ಯಾಗ, ವೈರಾಗ್ಯ ಮತ್ತು ಧರ್ಮಕ್ಕೆ ವಿಶಿಷ್ಠವಾದ ಐತಿಹ್ಯವಿದೆ. ಈ ಲೋಕವನ್ನು ಬಿಟ್ಟು ಹೋಗುವಾಗ ಆಸ್ತಿ, ಹಣ, ಬೆಳ್ಳಿ, ಬಂಗಾರ ಹಾಗೂ ವಜ್ರವನ್ನು ತಗೆದುಕೊಂಡು ಹೋಗಲು ಸಾಧ್ಯವಿಲ್ಲಾ. ಆದರೆ ದಾನ, ಧರ್ಮ ಮಾಡಿ ಪುಣ್ಯವನ್ನು ಮಾತ್ರ ನಮ್ಮೊಟ್ಟಿಗೆ ಒಯ್ಯಲು ಸಾಧ್ಯವಿದೆ ಎಂದರು.
ಈ ವೇಳೆ ಆಚಾರ್ಯ ವಿಮಲೇಶ್ವರ ಮುನಿ ಮಹಾರಾಜರು, ಆಚಾರ್ಯ ಅಮಿತಸೇನ ಮುನಿ ಮಹಾರಾಜರು, ಆತ್ಮಾರಾಮ ಸ್ವಾಮೀಜಿ, ತಾರಾಚಂದ ಮಹಾರಾಜರು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರು, ಕಾಂಗ್ರೆಸ ಮುಖಂಡ ಗಜಾನನ ಮಂಗಸೂಳಿ, ನೇಮಿನಾಥ ನಂದಗಾಂವ, ರಾವಸಾಬ ಪಾಟೀಲ, ಶೀತಲಗೌಡ ಪಾಟೀಲ, ಮಿಲಿಂದ ಪಾಟೀಲ, ಅಜಿತಗೌಡ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು,
ಪಾಶ್ರ್ವನಾಥ ಉಪಾಧ್ಯ ಸ್ವಾಗತಿಸಿ ವಂದಿಸಿದರು.