
ಸಂಜೆವಾಣಿ ವಾರ್ತೆ
ಲಿಂಗಸುಗೂರು.ಅ.೨೪:ಮನುಷ್ಯನಲ್ಲಿ ಒಳ್ಳೆಯ ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವ ನಾಶವಾಗುತ್ತದೆ. ಜ್ಞಾನ ಕ್ರಿಯಾತ್ಮಕವಾದ ಧರ್ಮಾಚರಣೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಮನುಷ್ಯ ಧರ್ಮ ಮತ್ತು ಧರ್ಮಾಚರಣೆಯನ್ನು ಮೀರಿ ನಡೆದರೆ ಅಪಾಯ ತಪ್ಪಿದ್ದಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಒಂಭತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸುಖ ಬಯಸುವುದು ಮನುಷ್ಯನ ಸಹಜ ಗುಣ. ಸುಖ ಸಂದರ್ಭದಲ್ಲಿ ದೇವರನ್ನು ಸ್ಮರಿಸುವವರು ಅತಿ ವಿರಳ. ಕಷ್ಟ ಬಂದಾಗ ದೇವರ ಮೊರೆ ಹೋಗುತ್ತಾನೆ. ಅಂತರAಗದ ಬೆಳಕಿಗಿಂತ ಬಹಿರಂಗದ ಬೆಳಕು ಹೆಚ್ಚೆಂದು ಮನುಷ್ಯ ಆಶಿಸುತ್ತಾನೆ. ಹೊನ್ನು ಹೆಣ್ಣು ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ ಜನ. ಆದರೆ ಭಗವಂತನಿಗಾಗಿ ಸತ್ತವರನ್ನು ಕಾಣಲಾಗದೆಂದು ಮಹಾನುಭಾವರು ಎಚ್ಚರಿಸಿದ್ದಾರೆ. ಮಹಾನುಭಾವರಿಗೆ ಸತ್ಯವೇ ಸಂಪತ್ತು. ಧರ್ಮವೇ ಅವರ ಸಂಪತ್ತು. ಹಸಿದು ಬಂದವರಿಗೂ ಕಡಿಯ ಬಂದವರಿಗೂ ನೆರಳು ಹಣ್ಣು ಕೊಡುತ್ತದೆ ಮರ. ತ್ಯಾಗ ಭೋಗವಿಲ್ಲದ ಬದುಕು ಫಲವಿಲ್ಲದ ವೃಕ್ಷದಂತೆ ವ್ಯರ್ಥ. ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಮನುಷ್ಯ ದೊಡ್ಡವನಾಗಲಾರ. ದೊಡ್ಡ ಮನಸ್ಸು ದೊಡ್ಡ ಗುಣ ಉಳ್ಳವನಿಗೆ ದೊಡ್ಡತನ ಸಿಗುತ್ತದೆ. ಜನ ಸಮುದಾಯಕ್ಕೆ ಬೆಳಕು ತೋರಿದ ಮಹಾತ್ಮರನ್ನು ಎಂದಿಗೂ ಮರೆಯದೇ ಸನ್ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಧರ್ಮವಾಗಬೇಕು. ಎಲ್ಲೆಡೆಯಲ್ಲಿ ತುಂಬಿದ ಪರಮಾತ್ಮ ಎಲ್ಲರ ಹೃದಯ ದೇಗುಲದಲ್ಲಿ ನೆಲೆಗೊಂಡಿದ್ದಾರೆ. ಶುದ್ಧ ಹೃದಯವು ಭಗವಂತನ ದರ್ಶನಕ್ಕೆ ಹೋಗುವ ಹೆಬ್ಬಾಗಿಲು. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ನಂದಾದೀಪ. ಹೃದಯ ದೇಗುಲದಲ್ಲಿರುವ ದೇವರನ್ನು ಕಾಣಲು ಶ್ರೀ ಗುರುವಿನ ಜ್ಞಾನಾಮೃತ ಅವಶ್ಯಕವೆಂದರು.ಶಿವಾದ್ವೆöÊತ ಸಿರಿ” ಅಮೂಲ್ಯ ಕೃತಿ ಬಿಡುಗಡೆ ಮಾಡಿದ ಬಸವರಾಜ ಪಾಟೀಲ ಅನ್ವರಿ ಅವರು ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲಘಟ್ಟದಲ್ಲಿ ಧರ್ಮ ಸಂಸ್ಕೃತಿ ಬೆಳವಣಿಗೆ ಬಗ್ಗೆ ನಿರ್ಲಕ್ಷ ಮನೋಭಾವ ತಾಳುತ್ತಿರುವ ಕಾರಣ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ.