ಧರ್ಮಸ್ಥಳ ಸಂಸ್ಥೆ ಸಮಾಜ ಸೇವೆಯಲ್ಲಿ ದೇಶಕ್ಕೆ ಮಾದರಿ : ತಿಮ್ಮರೆಡ್ಡಿ

ಶಿರಹಟ್ಟಿ,ಜು.26: ಧರ್ಮಸ್ಥಳ ಸಂಸ್ಥೆಯು ಬಡವರ ಪರ, ನೋಂದವರ ಧ್ವನಿ, ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ದೇಶಕ್ಕೆ ಮಾದರಿಯಾಗಿದೆ ಎಂದು ಗ್ರಾಪಂ ಸದಸ್ಯ ತಿಮ್ಮರೆಡ್ಡಿ ಮರಡ್ಡಿ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದ ಭೀಮರೆಡ್ಡಿ ಅಳವಂಡಿ ಹೆಣ್ಣು ಮಕ್ಕಳ ಪ್ರೌಢ ಶಾಲಾ ಆವರಣದಲ್ಲಿ ನಡೆದ ಸ್ವ-ಸಹಾಯ ಸಂಘಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಾವಿರಾರು ಸಂಘ ಸಂಸ್ಥೆಗಳಿವೇ, ಆದರೆ ಧರ್ಮಸ್ಥಳ ಸಂಸ್ಥೆಯಂತೆ ಕೆರೆ ಅಭಿವೃದ್ಧಿ ಪಡಿಸುವುದು, ಮಾಶಾಸ, ಶೈಕ್ಷಣಿಕ ಸೌಲಭ್ಯ, ಮದ್ಯವರ್ಜನ ಶಿಬಿರ ಹಾಗೂ ಮಹಿಳೆಯರಿಗೆ ಕರಕುಶಲ ತರಬೇತಿಗಳನ್ನು ನೀಡುವುದರ ಮೂಲಕ ಸ್ವಾವಲಂಬಿ ಬದುಕಿಗೆ ನಾಂದಿ ಹಾಡುವಂತಹ ಸಾವಿರಾರು ಸಮಾಜಮುಖಿ ಕೆಲಸ ಧರ್ಮಸ್ಥಳ ಸಂಸ್ಥೆಯಿಂದ ಮಾತ್ರ ಸಾಧ್ಯ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ. ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಕನಸ್ಸು ಕಂಡಂತೆ ರಾಷ್ಟ್ರಮಟ್ಟದಲ್ಲಿ ಯೋಜನೆಯನ್ನು ಅಭಿವೃದ್ಧಿ ಪಡಿಸಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
್ರಯೋಜನಾಧಿಕಾರಿ ಶಿವಣ್ಣ ಎಸ್ ಮಾತನಾಡಿ. ಪರಮಪೂಜ್ಯರ ಕನಸ್ಸಿನಂತೆ ತಾಲೂಕಿನಲ್ಲಿ 3820 ಸ್ವ-ಸಹಾಯ ಸಂಘಗಳು 40853 ಸದಸ್ಯರು ಇದ್ದು, ಸ್ವ-ಸಹಾಯ ಸಂಘಗಳು ಸಂಘಟನೆಯಾಗಿ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಸಂಘದ ಸದಸ್ಯರು ಸಮುದಾಯದ ಕೆಲಸದ ಜೊತೆಗೆ ಸಮಾಜದಲ್ಲಿ ನೋಂದಜನರ ಕಣ್ಣಿರೊರೆಸುವ ಕೆಲಸವನ್ನು ಪ್ರತಿಯೊಂದು ಸ್ವ-ಸಹಾಯ ಸಂಘಗಳು ಮಾಡಬೇಕು. ನಮ್ಮ ಗ್ರಾಮ ಸಾಕ್ಷರತೆ ಹೊಂದಲು ಪ್ರತಿಯೊಬ್ಬ ಮಹಿಳಾ ಸದಸ್ಯರು ಆಧುನಿಕ ಡಿಜಿಟಲಿಕರಣ ತಂತ್ರಜ್ಞಾನವನ್ನು ತಿಳಿದಿಕೊಳ್ಳುವ ಮುಖಾಂತರ ಸಮಾಜದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಬೇಕೆಂದು ಹೇಳಿದರು.
ಗ್ರಾಪಂ ಸದಸ್ಯ ಮೊಹನ್ ಗುತ್ತೆಮ್ಮನವರ, ಮೇಲ್ವಿಚಾರಕಿ ಶಾಂತಾ, ಸೇವಾಪ್ರತಿನಿಧಿ ರೇಣುಕಾ ಸ-್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷರು, ಮಹೇಶ್ವರಿ, ಓಂಕಾರ, ಓಂಶಕ್ತಿ, ಕಪ್ಪತ್ತಮಲ್ಲಯ್ಯ, ಕಾಳಿಕಾಂಬ ಸಂಘದ ಸದಸ್ಯರು ಉಪಸ್ಥಿತರಿದ್ದರು.