
ಜಗಳೂರು.ಡಿ.೩೦; : ನಾನು ಪಕ್ಷಾಂತರ ಮಾಡಿದ್ದರಿಂದ ಯಡಿಯೂರಪ್ಪ ಭದ್ರಾ ಯೋಜನೆಗೆ ಮುಂಜೂರಾತಿ ನೀಡಿದರು ನಂತರ ಅ ಯೋಜನೆ ನೆನೆಗುದಿಗೆ ಬಿತ್ತು ತದನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರದಿಂದ ಯಾವ ಕೆಲಸವಾಗಲಿಲ್ಲ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆ ರಾಷ್ಟೀಯ ಜಲ ನೀತಿಗೆ ಸೇರಿದ್ದು ಜಗಳೂರು ಶಾಖಾ ಕಾಲುವೆಗೆ 1200 ಕೋಟಿ ರೂ ಅನುದಾನ ಬಿಡುಗಡೆ ಯಾಗಿದ್ದು ಇನ್ನು 6 ತಿಂಗಳಲ್ಲಿ ಕಾಮಗಾರಿಗೆ ಮಠಾಧೀಶರನ್ನು ಕರೆಸಿ ಭೂಮಿ ಪೂಜೆ ನೇರವೇರಿಸಲಾಗುವುದು ಎಂದು ವಾಲ್ಮಿಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ಶರಣಬಸವೇಶ್ವರ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಘದ ಜಿಲ್ಲಾಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿ ವಿವಿಧ ಉದ್ದೇಶಗಳಿಗೆ ಸಾಲಸೌಲಭ್ಯಗಳನ್ನು ಕಲ್ಪಸಿ ಸಂಘದ ಪ್ರತಿನಿಧಿಗಳ ಮೂಲಕ ಸ್ವಯಂಪ್ರೇರಿತರಾಗಿ ಸಾಲಮರುಪಾವತಿ ಮಾಡುವ ಮೂಲಕ ತನ್ನ ಎಲ್ಲೆಯನ್ನು ಮೀರಿ ಆರ್ಥಿಕ ವಹಿವಾಟು ನಡೆಸುವ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಹೊಂದಿದೆ ಎಂದು ತಿಳಸಿದರು.ಶೀಘ್ರದಲ್ಲಿ ತಾಲೂಕಿನ ಕೆರೆಗಳು ಮೈದುಂಬಿ ಹರಿಯಲಿವೆ ಇದರಿಂದ ರೈತರು ಅನುಭವಿಸುತ್ತಿದ್ದ ಬರಕ್ಕೆ ಮುಕ್ತಿ ಸಿಗಲಿದೆ ಅಲ್ಲದೆ ದಶಕದ ಕನಸಿನ ಯೋಜನೆ ನೆನೆಗುದಿಗೆ ಬಿದ್ದಿರುವ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೊಜನೆಯನ್ನಾಗಿಸಿದ್ದು ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಉದ್ಘಾಟನೆಗೆ ಹಲವು ಗಣ್ಯರ ಜೊತೆ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಲಾಗುವುದು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಕಲ್ಪಿಸಲಾಗುವುದು ಎಂದರು.ಧರ್ಮಸ್ಥಳ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಮಂಜುನಾಥ ಮಾತನಾಡಿ,ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಅವರ ಸೇವಾಭಾವನೆ ಮತ್ತು ಮಂಜುನಾಥ ಸ್ವಾಮಿ ಕೃಪೆಯಿಂದ ಮಹಾಮಾರಿ ಕೊರೊನ ವೈರಾಣುವಿನಿಂದ ಸಂಸ್ಥೆಯ ಸಿಬ್ಬಂದಿಗಳು ಮುಕ್ತರಾಗಿದ್ದು ಕರ್ತವ್ಯನಿರತರಾಗಿದ್ದಾರೆ ಎಂದು ಸ್ಮರಿಸಿದರು.ರಾಜ್ಯದಲ್ಲಿ ದರ್ಮಸ್ಥಳ ಸಂಘದ 10 ಸಾವಿರ ಗ್ರಾಹಕ ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಇವುಗಳಿಂದ ಕೃಷಿ ಚಟುವಟಿಕೆ,ಮಹಿಳೆಯರ ಸ್ವಯಂ ಉದ್ಯೋಗಗಳಿಂದ ಸ್ವಾವಲಂಬಿ ಜೀವನ ಸಾಗಿಸಲು ಶೇ.14 ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ವಿತರಿಸಲಾಗುತ್ತಿದೆ ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ಮಹಿಳೆಯರು ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ್ ಎ ಎಂ ಮಾತನಾಡಿ,ಸಂಸ್ಥೆಯು ಉತ್ತುಂಗ ಶಿಖರದಲ್ಲಿರಲು ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ ಅಗತ್ಯ ದೇಶದಲ್ಲಿ ಪ್ರಸಕ್ತವಾಗಿ ಬಂಡವಾಳ ಹೂಡಿಕೆ ನಂತರ ಹಣಕಾಸು ವ್ಯವಹಾರಗಳು ಸುಗಮವಾಗಿ ನಡೆಯುವ ಫಲವಾಗಿ ಆಡಳಿತ ಸರ್ಕಾರಗಳಿಗೆ ಪೈಪೋಟಿಯಾಗಿ ಆರ್ಥಿಕ ಸಂಸ್ಥೆಗಳು ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಕ್ಯಾನೆರಾ ಬ್ಯಾಂಕ್ ವ್ಯವಸ್ಥಾಪಕ ನರೇಂದ್ರ ಜಿಪಂ ಸದಸ್ಯ ಎಸ್ ಕೆ ಮಂಜುನಾಥ ಪಟ್ಟಣಪಂಚಾಯಿತಿ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ಉಪಾಧ್ಯಕ್ಷೆ ಲಲಿತ ಶಿವಣ್ಣ ಸದಸ್ಯರಾದ ದೇವರಾಜ್ ಧರ್ಮಸ್ಥಳ ಸಂಸ್ಥೆಯ ಜನಾರ್ಧನ್ ಗುಣಕಾರ್ ಷಡಕ್ಷರಪ್ಪ ದುಗ್ಗೇಗೌಡ ಮಮತಾ ಶಿವಾನಂದ್ ಗಏಸೇರಿದಂತೆ ಉಪಸ್ಥಿತರಿದ್ದರು.