ಧರ್ಮಸ್ಥಳ ಸಂಸ್ಥೆಯಿಂದ ಮದ್ಯವರ್ಜನ ಶಿಬಿರ

ದಾವಣಗೆರೆ, ನ.೨೮; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಹೊನ್ನಾಳಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ ) ಹೆಚ್ ಗೋಪಗೊಂಡನಹಳ್ಳಿಯಲ್ಲಿ ೧೪೮೨ನೇ ಮದ್ಯವರ್ಜನ ಶಿಬಿರವನ್ನು ಆಯೋಜಿಸಿದ್ದು ಶಿಬಿರಾರ್ಥಿಗಳಿಗೆ ಉತ್ತಮ ಸಂದೇಶವನ್ನು ಕೊಟ್ಟಂತಹ ಎಚ್ ಎ ಉಮಾಪತಿ ಮಾತನಾಡಿ ಕುಡಿತದಿಂದ ಕುಟುಂಬ ಮತ್ತು ಮಕ್ಕಳು ಸಂಸಾರ ಹಾಳಾಗುತ್ತದೆ ಕುಡಿಯುವುದರಿಂದ ಮನಸ್ಸಿನ ಸ್ಥಿತಿ ಗತಿಗಳು ಸಮತೋಲನದಲ್ಲಿ ಇರುವುದಿಲ್ಲ ಸಂಬಂಧಿಕರು ನಿಮ್ಮನ್ನು ನೋಡುವ ಸ್ಥಿತಿ ನೀವು ಬಂದರೆ ದೂರ ಹೋಗುವುದು ಇಂಥ ಸಂದರ್ಭಗಳು ಉದ್ಭವಿಸುತ್ತವೆ ಎಂದು ಹೇಳಿದರು ಹಾಗೂ ಈಶ್ವರಿ ವಿಶ್ವವಿದ್ಯಾಲಯ ಸಂಚಾಲಕರಾದ ಜ್ಯೋತಿ ಅಕ್ಕನವರು ಮಾತನಾಡಿ ಎಷ್ಟೋ ಕೋಟಿ ಜೀವ ಜಂತುಗಳಲ್ಲಿ ಮನುಷ್ಯ ಜೀವ ದೊಡ್ಡದು ಎಂದು ತಿಳಿಸಿದರು ಆದರೆ ಪ್ರಾಣಿ ಪಕ್ಷಿಗಳು ಮನುಷ್ಯ ಯಾರು ತಪ್ಪು ಮಾಡುತ್ತಾರೆ ಎಂದು ಕೇಳಿದಾಗ ಶಿಬಿರಾರ್ಥಿಗಳು ಮನುಷ್ಯ ಎಂದು ತಿಳಿಸಿದರು.

ಮನುಷ್ಯ ಬುದ್ಧಿವಂತರಾದರೂ ಸಹ ತಪ್ಪನ್ನು ಮಾಡುವುದು ಮಾತ್ರ ಜಾಸ್ತಿ ಮನುಷ್ಯರು ಅತೀ ತಾಳ್ಮೆಯಿಂದ ಬುದ್ಧಿವಂತಿಕೆಯನ್ನು ಒಳ್ಳೆಯ ಕೆಲಸಗಳಿಗೆ ಬಳಸಬೇಕು ಹಾಗಾದಲ್ಲಿ ನಮ್ಮ ಭಾರತ ಸಂಸ್ಕೃತಿ ಮತ್ತು ಸಂಸ್ಕಾರ ನಮ್ಮ ದೇಶ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು ಶಿಬಿರಾರ್ಥಿಗಳು ಮದ್ಯ ವರ್ಜನ ಶಿಬಿರ ಮುಗಿದ ನಂತರ ಇಲ್ಲಿ ಕಲಿಸಿದಂಥ ಪ್ರಾಣಾಯಾಮ ಯೋಗ ಧ್ಯಾನಗಳ ಮುಂದೆಯೂ ಸಹ ಮನೆಯಲ್ಲಿ ಮುಂದುವರೆಸಬೇಕು ಹಾಗಿದ್ದಲ್ಲಿ ನಿಮ್ಮ ಕುಡಿತದ ಚಟದಿಂದ ನೀವು ದೂರವಿದ್ದು ಮನೆಯಲ್ಲಿ ಸಂತೋಷ ನಗು ಚೆಲ್ಲುತ್ತದೆ ನಿಮ್ಮ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಕತ್ತಗಿ ನಾಗರಾಜ್ ಹಾಗೂ ಕತ್ತಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್.ಎಚ್ ಜಿ ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಹಾಲಮ್ಮ.ಪತ್ರಕರ್ತರಾದ ಚೆನ್ನೆಶ ಇದಿರಮನೆ ಪಾಟೀಲ್ ಸುರೇಶ್ ಬಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಹೊಸಕೇರಿ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಮೇಲ್ವಿಚಾರಕ ನಾಗರಾಜ್ ಯೋಜನಾಧಿಕಾರಿ ಬಸವರಾಜ ಅಂಗಡಿ ಭಾಗವಹಿಸಿದ್ದರು.