ಧರ್ಮಸ್ಥಳ ಸಂಸ್ಥೆಯಿಂದ ಕಾಮನ್ ಸರ್ವಿಸ್ ಸೆಂಟರ್ ಪ್ರಾರಂಭ.

ಕೂಡ್ಲಿಗಿ.ನ. 14 :-  ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ತಾಲೂಕು ಯೋಜನಾ ಕಛೇರಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಕಾಮನ್ ಸರ್ವಿಸ್ ಕೇಂದ್ರದ  ಉದ್ಘಾಟನಾ  ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.  ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಾರದಬಾಯಿ.ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾವಲಿ ಶಿವಪ್ಪನಾಯಕ ಧರ್ಮಸ್ಥಳದ ಯೋಜನಾ ಕಛೇರಿ ಕೂಡ್ಲಿಗಿಯಲ್ಲಿ ಚಾಲನೆ ನೀಡಿದರು.
ಉದ್ಘಾಟನೆ ನೆರವೇರಿಸಿದ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಮಾತನಾಡಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ವೀರೇಂದ್ರ ಹೆಗ್ಗಡೆ ಅವರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿ ಮೈಲಿಗಲ್ಲು ಸಾಧಿಸಿದೆ.
ಸ್ವಸಹಾಯ ಸಂಘದಡಿ ಗ್ರಾಮೀಣ ಕುಟುಂಬಗಳಿಗೆ ಆಸರೆಯಾಗಿರುವ ಈ ಸಂಸ್ಥೆ, ಇದೀಗ ಕೇಂದ್ರ ಸರಕಾರ ದಿಂದ ಗ್ರಾಮಪಂಚಾಯಿತಿ ವರೆಗಿನ ಸುಮಾರು 600 ಕ್ಕೂ ಹೆಚ್ಚು ಆನ್ಲೈನ್ ಸೇವೆಗಳನ್ನು ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳನ್ನ ಪ್ರಾರಂಭಿಸುತ್ತಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಮೊದಲನೆಯ ಕೇಂದ್ರ ವನ್ನು ಯೋಜನಾ ಕಚೇರಿಯಲ್ಲಿ ಉದ್ಘಾಟಿಸಲಾಗಿದೆ ಎಂದು ಶಾರದಾಬಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾವಲಿ ಶಿವಪ್ಪನಾಯಕ.ಜನ ಜಾಗೃತಿ ವೇದಿಕೆ ಸದಸ್ಯರಾದ ಗುಂಡಪ್ಪ.ತಾಲೂಕು ಯೋಜನಾಧಿಕಾರಿ ಮಂಜುನಾಥ.ಎಂ.ಎಫ್.ಆಧಿಕಾರಿ ನಿಂಗಯ್ಯ.ಹಾಗೂ ನಗದು ಸಹಾಯಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.