ಧರ್ಮಸ್ಥಳ ಸಂಸ್ಥೆಯಿಂದ ಎಡಿ ಗುಡ್ಡ ದೇವಸ್ಥಾನ ಅಭಿವೃದ್ಧಿಗೆ 1.50ಲಕ್ಷ ರೂ ಮಂಜೂರು.


ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಜ. 1 :- ತಾಲೂಕಿನ  ವಿರುಪಾಪುರ ವಲಯದ ಅಮರದೇವರ ಗುಡ್ಡ ಕಾರ್ಯಕ್ಷೇತ್ರದ ಮರಿಯಮ್ಮ ಸೇವಾಲಾಲ್ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಹೆಗ್ಗಡೆಯವರು  ಪ್ರಸಾದದ ರೂಪದಲ್ಲಿ  ದೇವಸ್ಥಾನಕ್ಕೆ 1.50 ಲಕ್ಷ ರೂ ಮಂಜೂರು ಮಾಡಿದ್ದಾರೆ.
ಇದನ್ನು ನಿನ್ನೆ   ಡಿ.ಡಿ ರೂಪದಲ್ಲಿ  ಯೋಜನಾಧಿಕಾರಿಗಳಾದ ಸಂತೋಷರವರು  ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರಿಸಿ ಯೋಜನೆಯ ಹಲವಾರು ಕಾರ್ಯಕ್ರಮಗಳನ್ನು  ಎಲ್ಲಾ ಜನತೆ  ಉಪಯೋಗಿಸಿಕೊಳ್ಳಬೇಕು ಎಂಬುದರ ಮೂಲಕ ಯೋಜನೆಯ ಕಾರ್ಯಕ್ರಮಗಳನ್ನು ಪರಿಚಯಿಸಿದರು.
ಸದ್ರಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ  ಸ್ಥಾಯಿ ಸಮಿತಿ ಅಧ್ಯಕ್ಷ ಪೂರ್ಯಾನಾಯ್ಕ್ , ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ ಸ್ಥಳೀಯ ಸೇವಾ ಪ್ರತಿನಿಧಿ ಭುವನೇಶ್ವರಮ್ಮ ಹಾಗೂ  ಗ್ರಾಮದ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.