ಧರ್ಮಸ್ಥಳ ಸಂಸ್ಥೆಯಿಂದ ಆಕ್ಸಿಜನ್ ಕಾನ್ಸಟ್ರೇಟ್ ಗಳ ಹಸ್ತಾಂತರ

ಚನ್ನಗಿರಿ. ಮೇ.೩೧;  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನೀಡಿದ  10 ಲೀಟರ್ ನ ಎರಡು ಕಾನ್ಸಂಟ್ರೇಷನ್ ಗಳನ್ನು  ಕೋವಿಡ್ ಸೆಂಟರಿಗೆ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಹಸ್ತಾಂತರಿಸಿದರು.ನಂತರ ಮಾತನಾಡಿದ ಶಾಸಕರು ಡಾ. ವೀರೇಂದ್ರ ಹೆಗಡೆಯವರ ಸಮಾಜಸೇವೆ ಅಪಾರ. ಈಗಾಗಲೇ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೌಕರರು ಸೇವಕರಾಗಿ ಪ್ರತಿ ಹಳ್ಳಿಯಲ್ಲಿ ಜನರಿಗೆ ವ್ಯಾಕ್ಸಿನೇಷನ್  ಹಾಕಿಸಿಕೊಳ್ಳುವ ಬಗ್ಗೆ ಕೋರೋನದ ಬಗ್ಗೆ  ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ವಿರೇಂದ್ರ ಹೆಗಡೆಯವರು ಎರಡು 10 ಲೀಟರ್ ಪ್ರಮಾಣದ ಪ್ರಮಾಣದ ಕಾನ್ಸಂಟ್ರೇಷನ್ ನೀಡಿದ್ದಾರೆ ಜೊತೆಗೆತಾಲೂಕಿನ ಜನತೆಗೆ ಅನುಕೂಲವಾಗುವಂತೆ ಸಾಮಾಗ್ರಿಗಳನ್ನು ಕಳಿಸುತ್ತಿದ್ದಾರೆ ಇದು ಮಾನವೀಯ ಕಾರ್ಯ ಎಂದರು.ಈ ವೇಳೆ ಡಾ. ಪ್ರಭು. ಡಾ. ಅಶೋಕ್. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆ ಅಧಿಕಾರಿ ಜನಾರ್ದನ ಪೂಜಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.