ಧರ್ಮಸ್ಥಳ ಮಂಜುನಾಥ ಸಂಘದಿಂದ ಧನ ಸಹಾಯ

ಮುದ್ದೇಬಿಹಾಳ :ಮಾ.24: ತಾಲೂಕಿನ ಬಿದರಕುಂದಿ ಗ್ರಾಮದ ಶ್ರೀ ಸಂಗಮೇಶ್ವರ ಸಮುದಾಯ ಭವನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸಂಘದಿಂದ 3ಲಕ್ಷ ಧನ ಸಹಾಯ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ನಿರ್ದೇಶಕರಾದ ಸಂತೋಷಕುಮಾರ ರೈ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಗತಿಕರಿಗೆ, ಬಡವರಿಗೆ ಮನೆಗಳನ್ನು, ಮತ್ತು ಸಮುದಾಯ ಭವನಗಳಿಗೆ ಧರ್ಮಸ್ಥಳ ಮಂಜುನಾಥ ಸಂಘದಿಂದ ಅನುದಾನವನ್ನು ನೀಡಲಾಗುತ್ತದೆ, ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು ನಮ್ಮ ಸಂಘದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ಕಾರ್ಯಕ್ರಮ ಮಾಡಲು ನಾವು ಸದಾ ಮುಂದೆ ಇರುತ್ತೇವೆ.
ನಮ್ಮ ತಾಲೂಕಿನಲ್ಲಿ ಸುಮಾರು ಲಕ್ಷ ಅನುದಾನವನ್ನು ಇಂದು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಗ್ರಾಮದ ನಿವೃತ್ತಿ ಶಿಕ್ಷಕರಾದ ಸಂಗಣ್ಣ ಬಡಿಗೇರ ಮಾತನಾಡಿ ಇಂದಿನ ವ್ಯವಸ್ಥೆಯಲ್ಲಿ ದಾನ ಧರ್ಮ ಮಾಡುವದು ಅತಿ ವಿರಳ, ದಾನ ಧರ್ಮ ತುಂಬಿದ ಈ ಸಂಘದ ಕಾರ್ಯ ಸಾಮಾಜಿಕ ನಿಲುವನ್ನು ನಾವೆಲ್ಲರೂ ಮೆಚ್ಚುವಂತದ್ದು ಎಂದರು.
ಜನಜಾಗೃತಿ ನಿರ್ದೆಶಕರಾದ ಶ್ರೀಶೈಲ ದೊಡಮನಿ, ತಾಲೂಕು ಯೋಜನಾಧಿಕಾರಿಗಳಾದ ನಾಗೇಶ ಎನ್ ಪಿ, ಚಂದ್ರಶೇಖರ ಹತ್ತಿ ಮಾತನಾಡಿದರು.
ಇದೇ ವೇಳೆ ಧರ್ಮಸ್ಥಳ ಮಂಜುನಾಥ ಸಂಘದಿಂದ ಬಿದರಕುಂದಿ ಶ್ರೀ ಸಂಗಮೇಶ್ವರ ಸಮುದಾಯದ ಭವನಕ್ಕೆ ಮೂರು ಲಕ್ಷ ರೂಪಾಯಿಯ ಚೆಕ್ ನ್ನು ನೀಡಲಾಯಿತು.
ಈರಣ್ಣ ಮುತ್ಯಾ ಬಡಿಗೇರ ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು, ಚನ್ನಬಸಪ್ಪಗೌಡ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು,ತಿಪ್ಪಣ್ಣ ಸರೂರ, ಹಣಮಗೌಡ ಬಿರಾದಾರ, ಬಸಪ್ಪ ಕೊಂತಿಕಲ್, ಶಂಕ್ರಪ್ಪ ಸಜ್ಜನ,ಪ್ರಭು ಕೋಳೂರ, ಮನೋಹರ ಬಡಿಗೇರ,ಬಸವರಾಜ ಬಡಿಗೇರ,ಶಿವಯ್ಯ ಹೀರೆಮಠ,ಸಂಗಣ್ಣ ಬಡಿಗೇರ.ಕೆ ಜಿ ಕುರಿ, ಬೀಮಣ್ಣ ಹಣಮಸಾಗರ,ಗುರುರಾಜ್ ಚಿನಿವಾರ,ಬಸಲಿಂಗಪ್ಪ ಅಂಗಡಿ,ಗುರಸಂಗಪ್ಪ ಹುಲ್ಲಳ್ಳಿ,ಶಂಕ್ರಗೌಡ ಬಿರಾದಾರ,ಸಂತೋಷ ಬಾದರಬಂಡಿ
ಸಾಹೇಬಗೌಡ ಬಿರಾದಾರ, ನೀಲಮ್ಮ ಕನ್ನೂರ ಸೇವಾ ಪ್ರತಿನಿಧಿ, ಲಲಿತಾ ಎಂ ಬಿ ಮೇಲ್ವಿಚಾರಕಿಯರು,
ಒಕ್ಕೂಟದ ಅಧ್ಯಕ್ಷರು ಲಕ್ಮೀಂಬಾಯಿ ಬಿರಾದಾರ.
ಗುರುಬಾಯಿ ಪಾಟೀಲ್,ಶೋಬಾ ಬಿಜ್ಜೂರ,ಅನುಪಮಾ ಕೊಟಗಿ,ಬೋರಮ್ಮ ಸಜ್ಜನ, ಯಾಸ್ಮೀನ್ ಡವಳಗಿ.ಬಸಮ್ಮ ಮಾದರ.ಪಾರ್ವತಿ ಸಜ್ಜನ ಇನ್ನಿತರರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.