ಧರ್ಮಸ್ಥಳ ಧರ್ಮಾಧಿಕಾರಿಗಳಿಂದ ಉಚಿತ ವಾಹನ ವ್ಯವಸ್ಥೆ

ಹೊನ್ನಾಳಿ.ಮೇ.೫;  ತಾಲೂಕಿನಲ್ಲಿ ಕೋವಿಡ್ ಸೋಂಕಿತ, ಶಂಕಿತ ಬಡ ರೋಗಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಧರ್ಮಸ್ಥಳ ಧರ್ಮಾಧಿಕಾರಿಗಳು ರಾಜ್ಯಾದ್ಯಂತ ಉಚಿತ ವಾಹನಗಳನ್ನು ಒದಗಿಸಿದ್ದು  ಕಾಯ೯ ನಿರ್ವಾಹಕ  ನಿರ್ದೇಶಕರ  ಮಾರ್ಗದರ್ಶನದಂತೆ  ಹೊನ್ನಾಳಿ ತಾಲೂಕಿನಲ್ಲಿ 2 ವಾಹನಗಳು ಲಭ್ಯವಿದ್ದು  ಇವುಗಳನ್ನು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಕೆಂಚಪ್ಪ ರವರು ಚಾಲಕರಿಗೆ ಪಿಪಿಇ ಕಿಟ್ ವಿತರಿಸಿ ಸೇವೆಗೆ ಚಾಲನೆ ನೀಡಿ ಪೂಜ್ಯರ ಈ ಸಮಾಜಮುಖಿ ಕಾರ್ಯಕ್ಕೆ  ತಾಲ್ಲೂಕಿನ  ಪರವಾಗಿ ಕೃತಜ್ಞತೆ ಸಲ್ಲಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಶ್ಲಾಘನೀಯ ಎಂದರು. ಈ ಸಂದಭ೯ ವಾಹಗಳ ಸೇವೆಯ ವಿವರವನ್ನು ನೀಡಲಾಯಿತು. ಯೊಜನಾಧಿಕಾರಿ ಬಸವರಾಜ್, ಮೆಲ್ವಿಚಾರಕ ನಾಗರಾಜ್ ತಾಲ್ಲೂಕು  ಆರೊಗ್ಯ ಇಲಾಖೆಯ ಸಿಬ್ಬಂದಿಗಳಿದ್ದರು.