ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ 


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.14: ಸಮಾಜದಲ್ಲಿರುವ ಬಡ ಹಾಗೂ ನಿರ್ಗತಿಕರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ. ಎಸ್. ಸೋಮಲಿಂಗಪ್ಪ ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನದ ಬಳಿ  ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಜನಾಧಿಕಾರಿ ಸುಧೀರ್ ಹಂಗಳೂರು ಮಾತನಾಡಿ ತಾಲ್ಲೂಕಿನಾದ್ಯಂತ 56 ನಿರ್ಗತಿಕರನ್ನು ಗುರುತಿಸಿದ್ದು, ವಾತ್ಸಲ್ಯ ಕಿಟ್ ನೀಡುವ ಮೂಲಕ  ದೈನಂದಿನ ಬದುಕಿನ ಸಾಮಗ್ರಿ ವಿತರಿಸಿ ನೈತಿಕವಾಗಿ ಧೈಯ೯ ತುಂಬುವ ಕೆಲಸ ಸಂಸ್ಥೆಯು ಮಾಡುತ್ತಿದೆ ಎಂದರು.
ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ, ಅಣವಾಳು ಹುಸೇನಪ್ಪ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ, ತೆಕ್ಕಲಕೋಟೆ ವಲಯ ಮೇಲ್ವಿಚಾರಕಿ ದೀಪಿಕಾ.ಎಸ್, ಹಾಗೂ ಸೇವಾಪ್ರತಿನಿಧಿ  ಶಿವಲಿಂಗಮ್ಮ ಇದ್ದರು.