ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ

ಔರಾದ್ :ಸೆ.14: ಗ್ರಾಮೀಣ ಜನರ ಬದುಕಿನ ಸುಧಾರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪಾತ್ರ ದೊಡ್ಡದು’ ಎಂದು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡ ವರ ಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂಸ್ಥೆ ನಿರಂತರವಾಗಿ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆರ್ಥಿಕ ನೆರವಿನ ಮೂಲಕ ಸ್ವಾವಲಂಬನೆಯ ದಾರಿ ತೋರಿಸುತ್ತಿದೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಧರ್ಮಸ್ಥಳ ಕೇವಲ ಧರ್ಮಕ್ಷೇತ್ರವಷ್ಟೇ ಅಲ್ಲ, ಅದು ವಿದ್ಯಾ ಕ್ಷೇತ್ರ, ಸೇವಾಕ್ಷೇತ್ರ, ಗ್ರಾಮೀಣ ಅಭಿವೃದ್ಧಿ, ವೃತ್ತಿ ಶಿಕ್ಷಣ, ಜಲಸಂಚಯನ, ಉದ್ಯೋಗ, ಸಹಕಾರ ಸಂಘ, ಆರೋಗ್ಯ,ಕಲೆ ಸಂಗೀತ, ಸಾಹಿತ್ಯ, ಧರ್ಮಸಮ್ಮೇಳನ ಹೀಗೆ ಬದುಕಿನ ಎಲ್ಲಾ ಆಯಾಮಗಳನ್ನೂ ಸ್ಪರ್ಶಿಸುವ, ಪರಿವರ್ತಿಸುವ ಅಪರೂಪದ ಕ್ಷೇತ್ರವಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಯೋಜನೆಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.

ಟಿಎಚ್ ಒ ಡಾ. ಗಾಯತ್ರಿ, ಅಪರಾಧ ವಿಭಾಗದ ಪಿಎ??? ರೇಣುಕಾ ಭಾಲೆಕರ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಹಾಗೂ ಬಡವರ ಆರ್ಥಿಕ ಪ್ರಗತಿಗೆ ಸಹಾಯಹಸ್ತ ನೀಡುತ್ತಾ ಬಂದ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕತ್ತಲಲ್ಲಿ ಮುಳುಗಿದ ಕುಟುಂಬಗಳಿಗೆ ಹಾಗೂ ನಿರುದ್ಯೊ?ಗಿ ಯುವಕ-ಯುವತಿಯರಿಗೆ ಬೆಳಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕ.ಕಾ.ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಜಾಗೃತಿ ವೇದಿಕೆ ಸದಸ್ಯ ಉಮಾಕಾಂತ ಪಾಟೀಲ ಮಾತನಾಡಿದರು. ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಡಾ. ಶಾಲಿವಾನ ಉದಗೀರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಸಂಘದ ಸದಸ್ಯೆ ಸರಸ್ವತಿ ಅವರಿಗೆ ಗ್ರಿನ್ ವೇ ಒಲೆ ಹಾಗೂ ಸದಸ್ಯೆ ಆಶಾಬಾಯಿ ಅವರಿಗೆ ಶ್ರಮಯೋಗಿ ರೋಜಗಾರ ಕಾರ್ಡ್, ಸದಸ್ಯೆ ಸರಸ್ವತಿ ಅವರಿಗೆ ಸೋಲಾರ್ ವಿತರಣೆ ಮಾಡಲಾಯಿತು. ಪ್ರಮುಖರಾದ ಅಮೃತರಾವ ಬಿರಾದಾರ್, ಸಂದೀಪ ಪಾಟೀಲ್, ಮೇಲ್ವಿಚಾರಕರಾದ ಲೊಕೇಶ ಭಾಲ್ಕೆ, ರವಿ ರಾಠೋಡ್, ನಿತೀಶಕುಮಾರ ಬುಯಾ, ಸೇರಿದಂತೆ ವಲಯದ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಪಾಲ್ಗೊಂಡರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡಾ ಸ್ವಾಗತಿಸಿದರು.
ವಿಲಾಸ ಪೂಜಾರಿ ನಿರೂಪಿಸಿದರು. ಬಸವರಾಜ ಪೂಜಾರಿ ವಂದಿಸಿದರು.


ಗ್ರಾಮಾಭಿವೃದ್ಧಿ ಸಂಸ್ಥೆ ಪಾತ್ರ ದೊಡ್ಡದು : ತಹಸೀಲ್ದಾರ್ ಚಿದ್ರೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನಿರಂತರವಾಗಿ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆರ್ಥಿಕ ನೆರವಿನ ಮೂಲಕ ಸ್ವಾವಲಂಬನೆಯ ದಾರಿ ಮಾಡಿ ಕೊಡುತ್ತಿದೆ ಬದುಕಿನ ಸುಧಾರಣೆಯಲ್ಲಿ ಈ ಸಂಸ್ಥೆಯ ಪಾತ್ರ ತುಂಬಾ ದೊಡ್ಡದು.

ಮಲ್ಲಶೆಟ್ಟಿ ಚಿದ್ರೆ
ತಹಸೀಲ್ದಾರರು, ಔರಾದ