ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ವಿಕಲಚೇತನರಿಗೆ ಸಲಕರಣೆ ವಿತರಣೆ

ಸಿರವಾರ,ಜು.೦೫-
ತಾಲೂಕಿನ ಅತ್ತನೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮುದಾಯ ಕಾರ್ಯಕ್ರಮ ಅಭಿವೃದ್ಧಿ ಯೋಜನೆಯಡಿ ಜನ ಮಂಗಲ ದಡಿ ಅಶಕ್ತರಿಗೆ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಗ್ರಾಮದ ಮಹಾದೇವಪ್ಪ ನಾಯಕ ಎಂಬುವವರು ತಮ್ಮ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇದನ್ನು ಮನಗಂಡ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಉಚಿತವಾಗಿ ವೀಲ್ ಚೇರ್ ಮತ್ತು ಇನ್ನಿಬ್ಬರಿಗೆ ಹ್ಯಾಂಡ್ ಸ್ಟಿಕ್ ವಿತರಣೆ ಮಾಡಿದರು.
ನಂತರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಂದ್ರಹಾಸ ಅವರು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ನಮ್ಮ ಸಂಘದ ಸದಸ್ಯರನ್ನು ಹೊರತುಪಡಿಸಿ ಯಾರೇ ಆಗಿದ್ದರೂ ಅಂತವರಿಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡುತ್ತೇವೆ ಎಂದರು. ಅವರ ಪರಿಸ್ಥಿತಿಗನುಗುಣವಾಗಿ ವಿತರಣೆ ಮಾಡಲಾಗಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ವನಿತಾ, ಸೇವ ಪ್ರತಿನಿಧಿಗಳಾದ ಗಂಗಯ್ಯ ಸ್ವಾಮಿ, ಬೆಟ್ಟನಗೌಡ ಸೇರಿದಂತೆ ಮಹಿಳೆಯರು ಇದ್ದರು.