ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ರೈತರಿಗೆ ಧನಸಹಾಯ

ಹೊನ್ನಾಳಿ.ಏ.೨೩:  ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕುಂಕುವ ಗ್ರಾಮದಲ್ಲಿ  ಹೆಗ್ಗಡೆಯವರು ಮಂಜೂರು ಮಾಡಿದ ಸಹಾಧನದ ಚೆಕ್ ವಿತರಿಸಲಾಯಿತು , ಕುಂಕುವ ಗ್ರಾಮದ ಸೋಮಶೇಖರ್, ರವೀಂದ್ರ, ಸತೀಶ್,ಹಾಲಮ್ಮ ಶಾಂತಕುಮಾರಿ , ನಾಗರತ್ನಾ ಎಂಬ ರೈತರ ಮೆಕ್ಕೆಜೋಳ ತೆನೆ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಬೆಳೆ ಹಾನಿ ಯಾದ ಕಾರಣ ಯೋಜನೆಯ ವತಿಯೀಂದ ತಲಾ ರೂ 5000  ಮೊತ್ತ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯೆಯಾದ ಶ್ರೀಮತಿ, ಪುಷ್ಪಾ, ಗ್ರಾ ಪಂ ಸದಸ್ಯರಾದ ಬರವರಾಜ್, ಶಿವಕುಮಾರ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುರೇಶ ಹೊಸಕೇರಿ, ಜಿ ಜನಜಾಗೃತಿ ವೆದಿಕೆ ಸದಸ್ಯರಾದ ಶ್ರೀ ರುದ್ರೇಶ್, ತಾಲೂಕಿನ ಯೋಜನಾಧಿಕಾರಿ ಬಸವರಾಜ ಅಂಗಡಿ  ಭಾಗವಹಿಸಿದರು, ಒಕ್ಕೂಟದ ಅಧ್ಯಕ್ಷರು ಸದಸ್ಯರು ಉಪಸ್ಥಿಿತರಿದ್ದರು , ಸೇವಾಪ್ರತಿನಿಧಿ ಶ್ರೀಮತಿ ಗೀತಾ ಸ್ವಾಗತಿಸಿದರು, ಶಿಲ್ಪಾ ವಂದಿಸಿದರು.