ಧರ್ಮಸ್ಥಳ ಒಕ್ಕೂಟದ ಸದಸ್ಯರಿಗೆ ಸ್ವ ಉದ್ಯೋಗ ಮಾಹಿತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಕ್ಕುಡ ಒಕ್ಕೂಟದ ವತಿಯಿಂದ ಕಾಶಿಮಠ ಈಶ್ವರ ಭಟ್ ರವರ ಮನೆಯಲ್ಲಿ ನಡೆದ ರೈತಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರಿಗೆ ಸ್ವ ಉದ್ಯೋಗದ ಮಾಹಿತಿ ನೀಡಲಾಯಿತು.
ಜೇನು ಕೃಷಿ ಬಗ್ಗೆ ಸುಬ್ರಹ್ಮಣ್ಯ ಪ್ರಕಾಶ್, ಮಲ್ಲಿಗೆ ಕೃಷಿ ಬಗ್ಗೆ ನೀರ್ಕಜೆ ಗೀತಾ ಮತ್ತು ಪಿಂಗಾರ ತೋಟಗಾರಿಕಾ ಕಂಪೆನಿಯ ಜನಾರ್ಧನ ಪದ್ಮಶಾಲಿ ಹಲಸಿನ ಉತ್ಪನ್ನ ಹಾಗೂ ಬಾಳೆಕಾಯಿ ಚಿಪ್ಸ್ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲವಿಚಾರಕ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಅಧ್ಯಕ್ಷ ದಯಾನಂದ, ತಾಲೂಕಿನ ಕೃಷಿ ಮೇಲ್ವಿಚಾರಕಿ ನಂದಿತಾ, ಸೇವಾಪ್ರತಿನಿಧಿ ಹೇಮಲತಾ ಉಪಸ್ಥಿತರಿದ್ದರು. ತನಿಯಪ್ಪ ಮೂಲ್ಯ ಸ್ವಾಗತಿಸಿದರು. ಕಾವೇರಿ ವಂದಿಸಿದರು.
ಚಿದಾನಂದ ನಿರೂಪಿಸಿದರು.