ಸಂಜೆವಾಣಿ ವಾರ್ತೆ
ಸಂಡೂರು :ಮೇ:29: ಜ್ಞನಾರ್ಜನೆಯಲ್ಲಿ ಸುಜ್ಞನವೆಂಬುವುದು ಶ್ರೇಷ್ಠ ಸುಜ್ಞಾನದ ಮಹತ್ವವವನ್ನ ಶ್ರದ್ದೆಯಿಂದ ಸಾಧನೆಯಿಂದ ಬುದ್ದಿವಂತಿಕೆಯಿಂದ ಮಾತ್ರ ಹರಿಯಲು ಸಾಧ್ಯ. ಪ್ರತಿ ಮಕ್ಕಳಲ್ಲಿಯೂ ಸುಜ್ಞಾನ ಇದ್ದೇ ಇರುತ್ತದೆ. ಮಕ್ಕಳ ಪ್ರತಿಭೆಗೆ ಜ್ಞಾನಾರ್ಜನೆಗೆ ಶಿಕ್ಷಕನ ಪಾತ್ರ ಅಮೋಘವಾಗಿದ್ದು, ಮಕ್ಕಳ ಉಜ್ವಲ ಭವಿಷ್ಯ ಶಿಕ್ಷಕನ ಕೈಯಲ್ಲಿ ಇದೆ. ಸುಜ್ಞಾನ ನಿಧಿ ಶಿಷ್ಯವೇತನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸದ ವಿಚಾರವಾಗಿದ್ದು, ಪ್ರತಿ ಕ್ಷೇತ್ರದಲ್ಲಿಯೂ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ ಎಂದು ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಶುಭಾದೇವಿಯವರು ತಮ್ಮ ಮನದಾಳದ ಮಾತುಗಳನ್ನಾಡಿದರು.
ಪಟ್ಟಣದ ವಿರಶೈವ ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಮಟ್ಟದ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮಾಣ ಪ್ರಗಳನ್ನು ವಿತರಿಸಿ ಮಾತನಾಡಿದರು. ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಗಣೇಶ ಮಾತನಾಡಿ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಮತ್ತು ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರಾತಿನಿದ್ಯ ನೀಡಿ ವೇತನ ನೀಡಲಾಗುತ್ತಿದೆ. ಇಂಜಿನಿಯರಿಂಗ್, ಫಾರ್ಮಸಿ, ಪ್ಯಾರಾಮೆಡಿಕಲ್ಸ್ ನರ್ಸಿಂಗ್ ಡಿಪ್ಲೋಮಾ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್ ಓದುತ್ತಿರುವ 45 ವಿದ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕೇವಲ 22 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅವರ ಖಾತೆಗೆ ಒದಗಿಸಲಾಗುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳಿಗೂ ಅತೀ ಶೀಘ್ರದಲ್ಲಿಯೇ ಪ್ರಮಾಣ ಪತ್ರ ಒದಗಿಸಲಾಗುವುದು ಎಂದು ತಿಳಿಸಿದರು. ಆಯ್ಕೆಯಾದ ವಿದ್ಯರ್ಥಿಗಳಿಗೂ ಪೋಷಕರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದ ಕಾರ್ಯಕ್ರಮದಲ್ಲಿ ವಿದ್ಯರ್ಥಿಗಳಾದ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ರೋಹಿತ್ ಕುಮಾರ್, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.