ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ದೇಶಕ್ಕೆ ಮಾದರಿ :ಸಿದ್ದಲಿಂಗ ಸ್ವಾಮಿಜಿ ಆಂದೋಲ ಮಠ

ಕಲಬುರಗಿ,ಆ.24: ದುಶ್ಚಟದಿಂದ ನಿಮ್ಮ ಕುಟುಂಬಗಳು ಹಾಳಾಗುವುದರ ಜೊತೆಗೆ ನಿಮ್ಮ ಊರು ನಿಮ್ಮ ತಾಲೂಕು ನಿಮ್ಮ ಜಿಲ್ಲೆ ಸಂಪೂರ್ಣ ಅಧಪತನಗೊಳ್ಳುತ್ತದೆ. ಪೂಜ್ಯರ ಸಂಸ್ಥೆ ದೊಡ್ಡ ಸಂಸ್ಥೆ ಇದೆ. ತಮ್ಮ ತಮ್ಮ ಕಾರ್ಯಗಳನ್ನು ಮಾಡಬಹುದಾಗಿತ್ತು ಆದರೆ ಇಂತಹ ಮದ್ಯವರ್ಜನ ಶಿಬಿರದಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವುದರ ಮುಖಾಂತರ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೂಜ್ಯರ ಪಾತ್ರ ಮಹತ್ವದಾಗಿರುತ್ತದೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮಿ ಆಂದೋಲ ಮಠರವರು ಮಾತನಾಡಿದರು.
ರಾಮತೀರ್ಥ ಮಂದಾರ ಪುಷ್ಪ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಕುಡಿತ ಬಿಟ್ಟಿರೆ ಜಿವನದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿಯೂ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗಿದೆ ಎಂದರು.

ಶ್ರೀನಿವಾಸ ಸರಡಗಿ ಶಕ್ತಿಪಿಠದ ಶ್ರೀ ಡಾ. ಅಪ್ಪರಾವ್ ಮುತ್ಯಾರವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಅವರು ಪರಮ ಪೂಜ್ಯರಂತಹ ವಿಶೇಷ ವ್ಯಕ್ತಿ ಈ ಸಮಾಜದಲ್ಲಿ ಜನಿಸಿ ನಿಮ್ಮಂತಹ ಅನೇಕ ಕುಟುಂಬಗಳಿಗೆ ಬೆಳಕಾಗಿರುವುದು ದೇಶಕ್ಕೆ ಮಾದರಿ ಆಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಮಾತನಾಡಿ 97 ಶಿಬಿರಾರ್ಥಿಗಳು ಈ ಒಂದು ಮದ್ಯವರ್ಜನ ಶಿಬಿರದಲ್ಲಿ 08 ದಿನಗಳ ಕಾಲ ಆಧ್ಯಾತ್ಮಿಕತೆ ಯೋಗ ಕೌನ್ಸಲಿಂಗ್ ಸೇರಿ ನಾನಾ ವಿಧಾನಗಳಿಂದ ಮಧ್ಯದಿಂದ ಶಿಬಿರಾರ್ಥಿಗಳನ್ನು ವಿಮುಕ್ತರನ್ನಾಗಿ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟು 125000 ಜನರನ್ನು ಮದ್ಯಮುಕ್ತರನ್ನಾಗಿಸಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶರಣಪ್ಪ ಗುತ್ತೆದಾರ ಅಧ್ಯಕ್ಷತೆ ವಹಿಸಿದರು. ಜನಜಾಗೃತಿ ವಿಭಾಗದ ಯೋಜನಾಧಿಕಾರಿ ರಾಜೇಶ ಕೆ. ಕಮಲಾಪುರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಕಲ್ಲನಗೌಡ ಎಸ್. ಸ್ವಾಗತಿಸಿದರು. ಕೃಷಿ ಅಧಿಕಾರಿ ವೀರೇಶ ಎಸ್. ನಿರೂಪಿಸಿದರು. ರವಿಕುಮಾರ ನೀಲೂರು, ಅನಿಲಕುಮಾರ ಡಾಂಗೆ, ಶಿವರಾಜ ತಳವಾರ, ಶರಣು ಪಾಟೀಲ್, ಸುಭಾಷ ಮಹಾರಾಜ, ಸೂರ್ಯಕಾಂತ ಅವರಾದ, ಮೊಹನ, ಲೊಹಿತಕುಮಾರ ನೀಲೂರ, ದತ್ತು ಪವಾರ, ಮೇಲ್ವಿಚಾರಕರಾದ ಸಂತೋಷ, ನವಜೀವನ ಸಮಿತಿ ಸದಸ್ಯರು ಮತ್ತು ಮಹಿಳೆಯವರು ಭಾಗವಹಿಸಿದ್ದರು.