ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ಶಸ್ತ್ರ ಚಿಕಿತ್ಸೆಗೆ ನೆರವು

ಕೆ.ಆರ್.ಪೇಟೆ:ಮಾ:28: ಬಾಲಕನ ವಿಚಿತ್ರ ಕಾಯಿಲೆಯ ಶಸ್ತ್ರಚಿಕಿತ್ಸೆಗೆ ಧರ್ಮಸ್ಥಳ ಸಂಸ್ಥೆಯಿಂದ ನೆರವು.
ತಾಲ್ಲೂಕಿನ ಮಾಚಹೊಳಲು ಗ್ರಾಮದಲ್ಲಿ ಕಳೆದ 3-4 ತಿಂಗಳುಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಿಜಾಪುರ ಮೂಲದ ರಮೇಶ್ ಸಾತಪ್ಪ ಸರಸಂಬಿ ಎಂಬುವವರ ಮಗ ಗಣೇಶ್ 13 ವರ್ಷದ ಬಾಲಕನಿಗೆ ವಿಚಿತ್ರವಾದ ಕಾಯಿಲೆಯನ್ನು ಪಡೆದುಕೊಂಡು ಜನನವಾಗಿದ್ದು, ಈತನಿಗೆ ಈಗಾಗಲೇ 5 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ, ಮತ್ತೊಂದು ಬಾರಿಯ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು ಅವರ ಬಳಿ ಹಣವಿಲ್ಲದೇ ಸಂಕಷ್ಟದಲ್ಲಿದ್ದ ಸಮಯದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ವೀರೆಂದ್ರ ಹೆಗ್ಗಡೆಯವರು ಬಾಲಕನ ಚಿಕಿತ್ಸಾವೆಚ್ಚಕ್ಕೆಂದು 25000 ರೂಪಾಯಿಗಳ ನೆರವನ್ನು ನೀಡಿದ್ದಾರೆ.
ಈ ಕುರಿತು ಹಣ ಮಂಜೂರಾದ ಆದೇಶದ ಪತ್ರವನ್ನು ಜಿಲ್ಲಾ ನಿರ್ದೆಶಕ ಸದಾನಂದ ಹಾಗೂ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಬಾಲಕನ ತಂದೆತಾಯಿಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಜಿಲ್ಲಾ ನಿರ್ದೆಶಕ ಸದಾನಂದ ಕಳೆದ ಒಂದು ತಿಂಗಳ ಹಿಂದೆ ಪತ್ರಿಕೆಯಲ್ಲಿ ಬಾಲಕನ ಚಿಕಿತ್ಸೆಯ ನೆರವಿಗಾಗಿ ಮನವಿ ಮಾಡಿದ್ದ ವಿವರವನ್ನು ಸಂಸ್ಥೆಗೆ ಕಳುಹಿಸಿಕೊಟ್ಟಿದ್ದಾರೆ.
ಪೂಜ್ಯರು ಬಾಲಕನ ಪೋಷಕರ ಕಷ್ಟಕ್ಕೆ ಮಿಡಿದು ಚಿಕತ್ಸೆ ನೀಡಲು ಶ್ರೀಕ್ಷೇತ್ರದ ವತಿಯಿಂದ 25000 ರೂಪಾಯಿಗಳನ್ನು ಮಂಜೂರು ಮಾಡಿದ್ದು ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.